ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಆಟೋ ಪಲ್ಟಿ: 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ - ಮೊಬೈಲ್​ನಲ್ಲಿ ಮಾತನಾಡುತ್ತಾ ಆಟೋ ಚಾಲನೆ

ಗಂಗಾವತಿ ನಗರದ ಕನಕದಾಸ ವೃತ್ತದ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ ಮಕ್ಕಳು ಗಾಯಗೊಂಡಿದ್ದಾರೆ.

auto overturned
ಆಟೋ ಪಲ್ಟಿ

By

Published : Dec 5, 2022, 11:14 AM IST

ಗಂಗಾವತಿ(ಕೊಪ್ಪಳ): ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಗರದ ಕನಕದಾಸ ವೃತ್ತದ ಬಳಿ ಸಂಭವಿಸಿದೆ.

ಲಯನ್ಸ್ ಶಾಲೆಯ ಸಂಜೀವ್, ಮುರ್ತುಜಾ ಬೇಗಂ, ನಿಹಾರಿಕಾ, ಸಾರಿಕಾ, ಭಾಗ್ಯಶ್ರೀ, ನಂದಿನಿ, ಸಹನಾ, ಅಶ್ವಿನಿ, ಅಭಯ್ ಮೊದಲಾದ‌ ಮಕ್ಕಳಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಲೆ, ಬೆನ್ನು ಮತ್ತು ಮೂಳೆಯ ಭಾಗಕ್ಕೆ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಬಾಲಕ ಸಾವು.. ಹೆಚ್​ಡಿಕೆ ಎದುರು ಶವವಿಟ್ಟು ಪ್ರತಿಭಟನೆ

ಘಟನೆ ಜರುಗುತ್ತಿದ್ದಂತೆ ಆಟೋ ಚಾಲಕ ನಾಪತ್ತೆಯಾಗಿದ್ದು, ಗಾಯಗೊಂಡ ಮಕ್ಕಳನ್ನು ಉಪವಿಭಾಗ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಮೊಬೈಲ್​ನಲ್ಲಿ ಮಾತನಾಡುತ್ತಾ ಆಟೋ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆ ಮಧ್ಯೆ ಹಂಪ್​ ಬಂದ ಕಾರಣ ಸಡನ್ ಆಗಿ ಬ್ರೇಕ್ ಹಾಕಲು ಮುಂದಾದಾಗ ದುರಂತ ಸಂಭವಿಸಿದೆ ಎಂದು ಮಕ್ಕಳು ತಿಳಿಸಿದ್ದಾರೆ.

ABOUT THE AUTHOR

...view details