ಗಂಗಾವತಿ(ಕೊಪ್ಪಳ):ಹತ್ತನೇ ತರಗತಿಯ ವಿಜ್ಞಾನ ವಿಷಯದಲ್ಲಿ ಚಿತ್ರ ಬಿಡಿಸಲು 16ರಿಂದ 20 ಅಂಕ ಇರುವ ಕಾರಣಕ್ಕೆ ಸುಲಭ ಹಾಗೂ ಸರಳವಾಗಿ ಚಿತ್ರಗಳು ನೆನಪಲ್ಲಿ ಇರಲಿ ಎಂಬ ಕಾರಣಕ್ಕೆ ಮಕ್ಕಳು ನಾನಾ ಕಲಿಕಾ ತಂತ್ರದ ಮೊರೆ ಹೋಗುತ್ತಿದ್ದಾರೆ.
ಅಂಕ ಪಡೆಯಲು ಮಕ್ಕಳ ಸರ್ಕಸ್: ರಂಗೋಲಿಯಲ್ಲಿ ಮೂಡಿದ ಮಾನವನ ದೇಹದ ವಿವಿಧ ಅಂಗಾಂಗಗಳು - ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾನವ ದೇಹದ ನಾನಾ ಅಂಗಗಳನ್ನು ರಂಗೋಲಿ
ಯರಡೋಣ ಶಾಲೆಯ ಮಕ್ಕಳು, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾನವ ದೇಹದ ನಾನಾ ಅಂಗಗಳನ್ನು ರಂಗೋಲಿ ಮೂಲಕ ಬಿಡಿಸಿ ಗಮನ ಸೆಳೆದಿದ್ದಾರೆ.
ರಂಗೋಲಿ
ಇತ್ತೀಚೆಗಷ್ಟೇ ಕಾರಟಗಿ ತಾಲೂಕಿನ ಬೂದಗುಂಪಾ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಮೆಹಂದಿಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಾನವ ದೇಹದ ನಾನಾ ಅಂಗಗಳನ್ನು ಬಿಡಿಸಿಕೊಂಡು ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಇದೀಗ ಇದೇ ತಾಲೂಕಿನ ಯರಡೋಣ ಶಾಲೆಯ ಮಕ್ಕಳು, ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ.
ಮುಖ್ಯಗುರು ವಿಜಯಕುಮಾರ, ಶಿಕ್ಷಕರಾದ ಶೈಲಜಾ ನಾಯ್ಕ್, ರಹೆಮತುಲ್ಲಾ ಮಾರ್ಗದರ್ಶನದಲ್ಲಿ ಶಾಲೆಯ ಆವರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಮಾನವನ ದೇಹದ ಅಂಗಾಂಗ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ಗಮನ ಸೆಳೆದಿದ್ದಾರೆ.