ಕೊಪ್ಪಳ: ನೀರಿನ ಹೊಂಡಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.
ಕುದರಿಮೋತಿ ಗ್ರಾಮದ ವಿಜಯ ಮಹಾಂತೇಶ ವಸತಿ ಶಾಲೆಯ ವಿದ್ಯಾರ್ಥಿ ಕೋಟೇಶ್ (10) ಮೃತ ಬಾಲಕ. ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥ ಪಂಪಣ್ಣ ಎಂಬುವವರಿಗೆ ಸೇರಿದ ವಾಹನವನ್ನು ತೊಳೆಯಲು ಚಾಲಕ ಆನಂದ ಎಂಬಾತ ಬಾಲಕ ಕೋಟೇಶನನ್ನು ಹೊಂಡಕ್ಕೆ ಕರೆದುಕೊಂಡು ಹೋಗಿದ್ದನಂತೆ. ಹೊಂಡದ ಬಳಿ ವಾಹನ ತೊಳೆಯುತ್ತಿರುವ ಸಂದರ್ಭದಲ್ಲಿ ಬಾಲಕ ಕೋಟೇಶ್ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.