ಕುಷ್ಟಗಿ (ಕೊಪ್ಪಳ): ಬಿಜೆಪಿ ಯುವ ಮೋರ್ಚಾ ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನದಲ್ಲಿ ಕೋವಿಡ್ ಭೀತಿಯಿಲ್ಲದೇ ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಇರುವುದು ಕಂಡು ಬಂತು.
ಕುಷ್ಟಗಿ: ಬೀದಿ ನಾಟಕ ಪ್ರದರ್ಶನ: ಸಾಮಾಜಿಕ ಅಂತರ ಮರೆತ ಜನ - ಬೀದಿ ನಾಟಕ ಪ್ರದರ್ಶನ ಕುಷ್ಟಗಿ
ಬಿಜೆಪಿ ಯುವ ಮೋರ್ಚಾ ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನದಲ್ಲಿ ಕೋವಿಡ್ ಭೀತಿಯಿಲ್ಲದೇ ಯಾವುದೇ ಸಾಮಾಜಿಕ ಅಂತರ ಪಾಲಿಸದೇ ಇರುವುದು ಕಂಡು ಬಂತು.
ಸಾಮಾಜಿಕ ಅಂತರ ಮರೆತ ಜನ
ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಸಾಮೂಹಿಕವಾಗಿ ಹಬ್ಬಿದ್ದು, ಈ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾದವರು, ಡ್ರಗ್ಸ್ ಹಿನ್ನೆಲೆಯಲ್ಲಿ ಬೀದಿ ನಾಟಕ ನೋಡಲು ಮುಗಿ ಬಿದ್ದಿರುವುದು ಕಂಡು ಬಂತು. ಪ್ರದರ್ಶನದ ಪ್ರೇಕ್ಷಕ ವರ್ಗದಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಿರದೇ ಅಂಟಿಕೊಂಡು ನಿಂತಿದ್ದರು.
ಆಯೋಜಕರು ಸಾಮಾಜಿಕ ಅಂತರದ ಬಗ್ಗೆ ಪ್ರಸ್ತಾಪಿಸಿದರೂ ಕೊರೊನಾದ ಅರಿವಿಲ್ಲದೇ ಬೀದಿ ನಾಟಕದ ಮನೋರಂಜನೆ ಸವಿದರು.