ಕರ್ನಾಟಕ

karnataka

ETV Bharat / state

ಬಣವೆ ಒಟ್ಟುವುದೂ ಒಂದು ಕಲೆ.. ವರ್ಷಗಟ್ಟಲೇ ಮೇವು ಕೆಡದಂತೆ ಇಡೋದು ಹೀಗೆ.. - ಕೊಪ್ಪಳ ರೈತರಿಂದ ಬಣವೆ ನಿರ್ಮಾಣ

ಜೋಳದ ದಂಟಿನ ಮೇವು, ಕಡಲೆ, ಶೇಂಗಾ ಹೊಟ್ಟನ್ನು ಅತ್ಯಂತ ಜತನದಿಂದ ಬಣವೆಯಲ್ಲಿ ಸಂಗ್ರಹಿಸುವ ಕಾರ್ಯ ಜೋರಾಗಿದೆ. ಜಿಲ್ಲೆಯ ಎರಿ ಭಾಗದಲ್ಲಿ ಈಗ ಎಲ್ಲೆಲ್ಲೂ ಬಣವೆಗಳೇ ಕಾಣ ಸಿಗುತ್ತವೆ. ನೋಡುವುದಕ್ಕೂ ಆಕರ್ಷಿಣೀಯವಾಗಿವೆ..

Story behind the Stack of grass
ವರ್ಷಗಟ್ಟಲೆ ಮೇವು ಕೆಡದಂತೆ ಇಡುವುದು ಹೇಗೆ ಗೊತ್ತಾ..?

By

Published : Apr 3, 2021, 9:17 PM IST

ಕೊಪ್ಪಳ : ಮಳೆಗಾಲ, ಅತಿವೃಷ್ಟಿ-ಅನಾವೃಷ್ಟಿಯ ಸಮಯದಲ್ಲಿ ಜಾನುವಾರುಗಳಿಗೆ ಸಾಕಷ್ಟು ಮೇವು ಲಭ್ಯವಿರುವುದಿಲ್ಲ. ಹಾಗಾಗಿಯೇ, ರೈತರು ಅಗತ್ಯವಿರುವಷ್ಟು ಮೇವನ್ನು ಬಣವೆಗಳ ರೂಪದಲ್ಲಿ ಮೊದಲೇ ಸಂಗ್ರಹಿಸುತ್ತಾರೆ. ಹೀಗೆ, ಮೇವು ಸಂಗ್ರಹಿಸಲು ಬಣವೆ ಒಟ್ಟುವುದರ ಹಿಂದೆಯೂ ಒಂದು ಕಲೆಯಿದೆ.

ಹುಲ್ಲಿನ ಬಣವೆಗಳನ್ನು ಯಾವಾಗಲೂ ತ್ರಿಭುಜಾಕರದಲ್ಲೇ ಮಾಡಲಾಗುತ್ತದೆ. ಇದರ ಹಿಂದೆ ವರ್ಷ ಕಳೆದರೂ ಮೇವು ಕೆಡದಂತೆ ಕಾಪಾಡುವ ಒಂದು ಚಾಕಚಕ್ಯತೆಯಿದೆ. ತ್ರಿಭುಜಾಕಾರದಲ್ಲಿ ಬಣವೆಗಳನ್ನು ಮಾಡಿದರೆ ಮಳೆ ನೀರು ಅದರೊಳಗೆ ಹೋಗುವುದಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಮೇವು ಕೆಡುವುದಿಲ್ಲ ಎಂಬುವುದು ಅಷ್ಟೇ ನಿಜ. ಹಿಂದಿನಿಂದಲೂ ಈ ಪದ್ಧತಿ ಪಾಲಿಸಿಕೊಂಡು ಬರಲಾಗುತ್ತದೆ.

ವರ್ಷಗಟ್ಟಲೇ ಮೇವು ಕೆಡದಂತೆ ಇಡುವುದು ಹೀಗೆ..

ಓದಿ : ಹಿಂದೂ ದೇವರು ಕೊರಗಜ್ಜನ ಗುಡಿ ಕಟ್ಟಿ ಪೂಜಿಸುವ ಮುಸ್ಲಿಂ.. ಸಾಮರಸ್ಯಕ್ಕೊಂದು ನಿದರ್ಶನ, ಭಕ್ತಿಯೇ ಇಲ್ಲಿ ಧರ್ಮ!

ಬಣವೆ ಒಟ್ಟುವ ಕಲೆ ಎಲ್ಲರಿಗೂ ಬರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಒಂದಿಷ್ಟು ಮಂದಿ ಬಣವೆ ಒಟ್ಟುವುದರಲ್ಲಿ ನಿಪುಣರಿರುತ್ತಾರೆ. ಅಂತಹವರನ್ನು ಕರೆತಂದು ರೈತರು ಬಣವೆ ಒಟ್ಟಿಸಿಕೊಳ್ಳುತ್ತಾರೆ. ಸದ್ಯ, ಜಿಲ್ಲೆಯ ಯಲಬುರ್ಗಾ, ಕುಕನೂರು, ಕೊಪ್ಪಳ ತಾಲೂಕಿನ ಎರೆ ಭಾಗದಲ್ಲಿ ಬಿಳಿಜೋಳ, ಕಡಲೆಯ ಸುಗ್ಗಿ ಮಾಡಲಾಗಿದೆ.

ಜೋಳದ ದಂಟಿನ ಮೇವು, ಕಡಲೆ, ಶೇಂಗಾ ಹೊಟ್ಟನ್ನು ಅತ್ಯಂತ ಜತನದಿಂದ ಬಣವೆಯಲ್ಲಿ ಸಂಗ್ರಹಿಸುವ ಕಾರ್ಯ ಜೋರಾಗಿದೆ. ಜಿಲ್ಲೆಯ ಎರಿ ಭಾಗದಲ್ಲಿ ಈಗ ಎಲ್ಲೆಲ್ಲೂ ಬಣವೆಗಳೇ ಕಾಣ ಸಿಗುತ್ತವೆ. ನೋಡುವುದಕ್ಕೂ ಆಕರ್ಷಿಣೀಯವಾಗಿವೆ.

ABOUT THE AUTHOR

...view details