ಕರ್ನಾಟಕ

karnataka

ETV Bharat / state

ಆಂಧ್ರಕ್ಕೆ ತೆರಳುತ್ತಿದ್ದ ಗಂಗಾವತಿ ಸಾರಿಗೆ ವಾಹನದ ಮೇಲೆ ಕಲ್ಲು ತೂರಾಟ - Koppala latest news

ಗಂಗಾವತಿಯಿಂದ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಹೋಗುತ್ತಿದ್ದ ಸಾರಿಗೆ ವಾಹನದ ಮೇಲೆ ರಾಯಚೂರು ಹೊರ ಭಾಗದಲ್ಲಿ ಅಪರಿಚಿತ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ.

Gangavti bus
Gangavti bus

By

Published : Apr 11, 2021, 7:33 PM IST

ಗಂಗಾವತಿ: ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶಕ್ಕೆ ಸಂಚರಿಸಲು ವಾಹನವನ್ನು ಬಿಟ್ಟ ಕಾರಣಕ್ಕೆ ಗಂಗಾವತಿ ಸಾರಿಗೆ ಘಟಕಕ್ಕೆ ಸೇರಿದ್ದ ವಾಹನವೊಂದರ ಮೇಲೆ ಅಪರಿಚಿತರು ಕಲ್ಲೆಸೆದು ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಗಂಗಾವತಿಯಿಂದ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಹೋಗುತ್ತಿದ್ದ ಸಾರಿಗೆ ವಾಹನದ ಮೇಲೆ ರಾಯಚೂರು ಹೊರಭಾಗದಲ್ಲಿ ಅಪರಿಚಿತ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ.

ಅದೃಷ್ಟವಶಾತ್ ಚಾಲಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿದ್ದ ಮೊಹಮ್ಮದ್​ ಖಾನ್​ ಅವರನ್ನು ವಿಜಯವಾಡದ ಮಾರ್ಗಕ್ಕೆ ನಿಯೋಜಿಸಲಾಗಿತ್ತು. ಘಟನೆ ಹಿನ್ನೆಲೆ ಚಾಲಕ ನೀಡಿದ ದೂರಿನ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details