ಕೊಪ್ಪಳ:ರಾಜ್ಯ ಲಲಿತ ಕಲಾ ಅಕಾಡೆಮಿ ಕೊಡಮಾಡುವ 49 ನೇ ವಾರ್ಷಿಕ ಕಲಾ ಪ್ರದರ್ಶನ ಬಹುಮಾನಕ್ಕೆ ನಗರದ ಪ್ರತಿಭಾವಂತ ಸೃಜನಶೀಲ ಯುವ ಛಾಯಾಗ್ರಾಹಕ ಭರತ ಕಂದಕೂರ ಅವರು ಆಯ್ಕೆಯಾಗಿದ್ದಾರೆ.
ಯುವ ಛಾಯಾಗ್ರಾಹಕ ಭರತ ಕಂದಕೂರಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ - State Fine Arts Academy Award for Young Photographer Bharata Kandukara
ಭರತ ಕಂದಕೂರು ಅವರು ಸೆರೆ ಹಿಡಿದ ‘ಗಾಲಿಯೊಳಗಿನ ಬದುಕು’ ಶೀರ್ಷಿಕೆಯ ಕಲಾಕೃತಿ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾಗಿದೆ.
ಯುವ ಛಾಯಾಗ್ರಾಹಕ ಭರತ ಕಂದಕೂರಗೆ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ
ಭರತ ಕಂದಕೂರು ಅವರು ಸೆರೆ ಹಿಡಿದ ‘ಗಾಲಿಯೊಳಗಿನ ಬದುಕು’ ಶೀರ್ಷಿಕೆಯ ಕಲಾಕೃತಿ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾಗಿದೆ. ಜನವರಿ ತಿಂಗಳಲ್ಲಿ ಲಲಿತ ಕಲಾ ಅಕಾಡೆಮಿ 49 ನೇ ವಾರ್ಷಿಕ ಕಲಾ ಬಹುಮಾನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಿತ್ತು. ಅದರಲ್ಲಿ ಉತ್ತಮವಾದ 89 ಕಲಾಕೃತಿಗಳನ್ನು ಆಯ್ಕೆ ಮಾಡಿ ಅದರಲ್ಲಿ 10 ಜನರ ಕಲಾಕೃತಿಗಳನ್ನು ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ 10 ಜನ ಕಲಾವಿದರಿಗೆ ತಲಾ 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಲಲಿತಕಲಾ ಅಕಾಡೆಮಿ ನೀಡಿ ಗೌರವಿಸಲಿದೆ.