ಕೊಪ್ಪಳ/ಗಂಗಾವತಿ:ಮತದಾರ ಜಾಗೃತಿ ದಿನಾಚರಣೆ ನಿಮಿತ್ತ ಕಾರಟಗಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಚುನಾವಣೆ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ, ಆಯೋಗ ನೀಡುವ ಕರ್ತವ್ಯವನ್ನು ಸಮರ್ಪಕವಾಗಿ ಹಾಗೂ ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವುದಾಗಿ ಪ್ರಮಾಣ ಮಾಡಿದ ಸಿಬ್ಬಂದಿ - ಗಂಗಾವತಿ ಸುದ್ದಿ
ಮತದಾರ ಜಾಗೃತಿ ದಿನಾಚರಣೆ ನಿಮಿತ್ತ ಕಾರಟಗಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಚುನಾವಣೆ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ, ಆಯೋಗ ನೀಡುವ ಕರ್ತವ್ಯವನ್ನು ಸಮರ್ಪಕವಾಗಿ ಹಾಗೂ ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ಪ್ರಮಾಣ ಮಾಡಿದ ಸಿಬ್ಬಂದಿ
ತಹಶೀಲ್ದಾರ್ ಕವಿತಾ ನೇತೃತ್ವದಲ್ಲಿ ಸಿಬ್ಬಂದಿ, ಚುನಾವಣಾ ಆಯೋಗ ನೀಡುವ ಕಾರ್ಯವನ್ನು ಅದರಲ್ಲೂ ವಿಶೇಷವಾಗಿ 18 ವರ್ಷ ತುಂಬಿದ ಯುವಕರನ್ನ ಯುವ ಮತದಾರರನ್ನಾಗಿ ಮಾಡುವಲ್ಲಿ ಪ್ರಮಾಣಿಕ ಯತ್ನ ಮಾಡುವುದಾಗಿ ಪ್ರಮಾಣ ಮಾಡಿದ್ರು.
ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವಿರುವ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತಾತ್ಮಕ ಮೌಲ್ಯಗಳ ವೃದ್ಧಿಗೆ ಹಾಗೂ ನ್ಯಾಯಸಮ್ಮತವಾದ ಚುನಾವಣೆಗೆ ಶ್ರಮಿಸುವುದಾಗಿ ಸಿಬ್ಬಂದಿಗೆ ಚುನಾವಣಾ ವಿಭಾಗದಿಂದ ಪ್ರತಿಜ್ಞೆ ಬೋಧಿಸಲಾಯಿತು.