ಕರ್ನಾಟಕ

karnataka

ETV Bharat / state

ಗಂಗಾವತಿ ಚೂರಿ ಇರಿತ ಪ್ರಕರಣ: 7 ಯುವಕರ ಮೇಲೆ ಎಫ್ಐಆರ್ ದಾಖಲು - gangavathi

ಆಕಸ್ಮಿಕವಾಗಿ ಒಬ್ಬರ ಕಾಲು ಮತ್ತೊಬ್ಬರು ತುಳಿದಿದ್ದಕ್ಕೆ ಗಲಭೆ ಉಂಟಾಗಿ ಯುವಕನೋರ್ವನ ಮೇಲೆ ಚೂರಿ ಇರಿದ ಘಟನೆ ಗಂಗಾವತಿಯಲ್ಲಿ ನಡೆದಿತ್ತು.

stabbing-case
ಚೂರಿ ಇರಿತ ಪ್ರಕರಣ

By

Published : Aug 9, 2022, 5:01 PM IST

ಗಂಗಾವತಿ:ಮೊಹರಂ ಹಬ್ಬದ ಅಂಗವಾಗಿ ದೇವರನ್ನು ನೋಡಲು ಹೋದಾಗ ಆಕಸ್ಮಿಕವಾಗಿ ಒಬ್ಬರ ಕಾಲನ್ನು ಮತ್ತೊಬ್ಬರು ತುಳಿದು ಉಂಟಾದ ಗಲಭೆ, ಚೂರಿ ಇರಿತದಲ್ಲಿ ಕೊನೆಯಾಗಿದ್ದು ಇದೀಗ ಏಳು ಯುವಕರ ಮೇಲೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಗುಂಡಮ್ಮಕ್ಯಾಂಪಿನ ಜೀವರಾಜ ಬಸವರಾಜ ಎಂಬ ಯುವಕ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ನಗರ ಠಾಣೆಯ ಪೊಲೀಸರಿಗೆ ಮೌಖಿಕ ಹೇಳಿಕೆ ಮೂಲಕ ದೂರು ನೀಡಿದ್ದಾನೆ. ಈ ದೂರಿನನ್ವಯ ವತ್ಲಿ ಮಂಜ, ಸಚಿನ್, ಮಧು, ಕ್ಯಾಂಡಿ ಮಂಜ, ಹನುಮಂತ, ಸೋಮ ಮತ್ತು ರಾಖಿ ಎಂಬ ಯುವಕರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ABOUT THE AUTHOR

...view details