ಕರ್ನಾಟಕ

karnataka

ETV Bharat / state

ಎಬಿವಿಪಿ ಕಾರ್ಯಕರ್ತರಿಂದ ಎಸ್ಎಸ್ಎಲ್​ಸಿ ವಿಜಯೀಭವ ಅಭಿಯಾನ - SSLC Vijayeebhava Campaign

ಕೊರೊನಾ ಭೀತಿ ನಡುವೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಎಬಿವಿಪಿ ಕಾರ್ಯಕರ್ತರು ನಗರದ ಪರೀಕ್ಷಾ ಕೇಂದ್ರಗಳ ಮುಂದೆ ಎಸ್ಎಸ್ಎಲ್​ಸಿ ವಿಜಯೀಭವ ಅಭಿಯಾನ ನಡೆಸಿದರು.

SSLC Vijayeebhava campaign by ABVP activists
ಎಬಿವಿಪಿ ಕಾರ್ಯಕರ್ತರಿಂದ ಎಸ್ಎಸ್ಎಲ್​ಸಿ ವಿಜಯೀಭವ ಅಭಿಯಾನ

By

Published : Jun 25, 2020, 1:05 PM IST

ಕೊಪ್ಪಳ:ಕೊರೊನಾ ಭೀತಿ ನಡುವೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಎಬಿವಿಪಿ ಕಾರ್ಯಕರ್ತರು ನಗರದ ಪರೀಕ್ಷಾ ಕೇಂದ್ರಗಳ ಮುಂದೆ ಎಸ್ಎಸ್ಎಲ್​ಸಿ ವಿಜಯೀಭವ ಅಭಿಯಾನ ನಡೆಸಿದರು.

ಎಬಿವಿಪಿ ಕಾರ್ಯಕರ್ತರಿಂದ ಎಸ್ಎಸ್ಎಲ್​ಸಿ ವಿಜಯೀಭವ ಅಭಿಯಾನ

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಧರ್ಯ ತುಂಬುವ ಮಾತುಗಳನ್ನಾಡಿದರು. ಅನಗತ್ಯವಾಗಿ ಕೊರೊನಾ ಬಗ್ಗೆ ವಿದ್ಯಾರ್ಥಿಗಳು ಭಯಪಡಬಾರದು. ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಕೊರೊನಾದಿಂದ‌ ದೂರವಿರಬಹುದು. ಯಾವುದೇ ಆತಂಕಕ್ಕೆ ಒಳಗಾಗದೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯುವ ಮೂಲಕ ವಿದ್ಯಾರ್ಥಿ ಜೀವನದ‌ ಮಹತ್ವದ ಘಟ್ಟವಾದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ವಿಜಯಿಗಳಾಗುವಂತೆ ಕರೆ ನೀಡಿದರು.

ಈ ವೇಳೆ ಎಬಿವಿಪಿ ಮುಖಂಡರಾದ ಜಂತಕಲ್, ರವಿಚಂದ್ರ ಮಾಲಿಪಾಟೀಲ್, ರಾಕೇಶ್ ಪಾನಘಂಟಿ ಸೇರಿದಂತೆ ಮೊದಲಾದವರು ನೇತೃತ್ವ ವಹಿಸಿದ್ದರು.

ABOUT THE AUTHOR

...view details