ಕರ್ನಾಟಕ

karnataka

ETV Bharat / state

ಅಂಜನಾದ್ರಿ ಹನುಮನ ಸನ್ನಿಧಾನಕ್ಕೆ ಶ್ರೀಲಂಕಾದ ರಾಯಭಾರಿ ಭೇಟಿ - Milinda Moragoda and wife Jennifer Moragoda

ರಾಮಾಯಣದಂತಹ ಪುರಾಣದ ಕಾಲಘಟ್ಟದಲ್ಲಿ ಕಿಷ್ಕಿಂಧೆ ಎಂದರೆ ಆನೆಗೊಂದಿ-ಹಂಪೆ ಪರಿಸರವಾಗಿದ್ದು, ಶ್ರೀಲಂಕೆಯನ್ನು ರಾವಣನ ರಾಜ್ಯ ಎಂದು ಕರೆಯಲಾಗಿತ್ತು.

Sri Lankan Ambassador Milinda Moragoda and wife Jennifer Moragoda
ಶ್ರೀಲಂಕಾದ ರಾಯಭಾರಿ ಮಿಲಿಂದ ಮೊರಗೋಡ ಹಾಗೂ ಪತ್ನಿ ಜೆನ್ನಿಫರ್ ಮೊರಗೋಡ

By

Published : Dec 16, 2022, 10:05 PM IST

ಕೊಪ್ಪಳ:ಗಂಗಾವತಿ ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಹಿಂದುಗಳ ಪವಿತ್ರ ಧಾರ್ಮಿಕ ತಾಣ ಅಂಜನಾದ್ರಿಯ ಹನುಮನ ಸನ್ನಿಧಾನಕ್ಕೆ ಶ್ರೀಲಂಕಾದ ರಾಯಭಾರಿ ಮಿಲಿಂದ ಮೊರಗೋಡ ಹಾಗೂ ಪತ್ನಿ ಜೆನ್ನಿಫರ್ ಮೊರಗೋಡ ಭೇಟಿ ನೀಡಿ ದರ್ಶನ ಪಡೆದರು.

ಹಂಪೆಯ ಪ್ರವಾಸಕ್ಕೆಂದು ಆಗಮಿಸಿದ ಅವರು, ಜಿಂದಾಲ್‌ನ ವಸತಿ ಗೃಹದಲ್ಲಿ ಉಳಿದಿದ್ದರು. ಅಲ್ಲಿನ ಸಿಬ್ಬಂದಿ ಹರಿ ಎಂಬುವವರು, ಅಂಜನಾದ್ರಿಯ ಮಾಹಿತಿ ನೀಡಿ ಭಾರತದಲ್ಲಿರುವ ಶ್ರೀಲಂಕಾದ ರಾಯಭಾರಿಗಳನ್ನು ಅಂಜನಾದ್ರಿ ದೇಗುಲಕ್ಕೆ ಕರೆತಂದು ದರ್ಶನ ಮಾಡಿಸಿದರು. ರಾಮಾಯಣದಂತಹ ಪುರಾಣದ ಕಾಲಘಟ್ಟದಲ್ಲಿ ಕಿಷ್ಕಿಂಧೆ ಎಂದರೆ ಆನೆಗೊಂದಿ-ಹಂಪೆ ಪರಿಸರವಾಗಿದ್ದು, ಶ್ರೀಲಂಕೆಯನ್ನು ರಾವಣನ ರಾಜ್ಯ ಎಂದು ಕರೆಯಲಾಗಿತ್ತು. ಇದೀಗ ರಾವಣನ ನಾಡಿನಿಂದ ರಾಯಭಾರಿಗಳು ಹನುಮನ ನಾಡಿಗೆ ಆಗಮಿಸಿ ಪವನಸುತನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಬಣ್ಣ ಸಹಿಸದವರು ಮನುಷ್ಯರ ಮಾನವೀಯತೆ ಸಹಿಸುತ್ತಾರಾ?: ಯು ಟಿ ಖಾದರ್

ABOUT THE AUTHOR

...view details