ಕೊಪ್ಪಳ:ಜಿಲ್ಲೆಯ ಕನಕಗಿರಿ ತಾಲೂಕಿನ ಸುಳೆಕಲ್ ಬೃಹನ್ಮಠ ಗ್ರಾಮದ ಭುವನೇಶ್ವರ ಶ್ರೀಗಳು ಕೊರೊನಾದಿಂದ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು.
ಕೊರೊನಾ ಗೆದ್ದ ಸುಳೇಕಲ್ ಬೃಹನ್ಮಠದ ಭುವನೇಶ್ವರ ಶ್ರೀಗಳು - ಕೊರೊನಾ ಗೆದ್ದ ಸುಳೇಕಲ್ ಬೃಹನ್ಮಠದ ಶ್ರೀ ಭುವನೇಶ್ವರ ಶ್ರೀಗಳು
ಕೆಲವು ದಿನದ ಹಿಂದೆ ಶ್ರೀಗಳಿಗೆ ಕೊರೊನಾ ಸೋಂಕು ತಗುಲಿದ್ದು, ಗಂಗಾವತಿಯ ಯಶೋಧಾ ಆಸ್ಪತ್ರೆಗೆ ದಾಖಲಾಗಿದ್ದರು.
ಶ್ರೀ ಭುವನೇಶ್ವರ ಶ್ರೀಗಳು ಕೊರೊನಾದಿಂದ ಗುಣಮುಖ
65 ವರ್ಷದ ಶ್ರೀಗಳಿಗೆ 10 ದಿನದ ಹಿಂದೆ ಕೊರೊನಾ ಸೋಂಕು ತಗುಲಿದ್ದು, ಗಂಗಾವತಿಯ ಯಶೋಧಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳ ಹಿಂದೆ ಶ್ರೀಗಳ ಮೊಮ್ಮಗ ಪ್ರಸಾದ್ ಅವರಿಗೆ ಸೋಂಕು ತಗುಲಿ ಮೃತಪಟ್ಟಿದ್ದರು. ಇದರಿಂದ ಶ್ರೀಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
'ನನಗೆ ನಿಜವಾಗಿಯೂ ಭಯವಾಗಿತ್ತು. ನಾನು ಮರಳಿ ಮಠಕ್ಕೆ ಹೋಗುವುದಕ್ಕೆ ವೈದ್ಯರು ಕಾರಣ' ಎಂದು ಅವರು ಹೇಳಿದ್ದಾರೆ. ಶ್ರೀಗಳು ಗುಣಮುಖರಾಗಿದ್ದಕ್ಕೆ ಭಕ್ತರು ಸಂತಸಗೊಂಡಿದ್ದಾರೆ. ಆಸ್ಪತ್ರೆ ಕಡೆಯಿಂದ ಸನ್ಮಾನಿಸಿ ಬಿಡುಗಡೆ ಮಾಡಲಾಯಿತು.
Last Updated : May 31, 2021, 2:30 PM IST