ETV Bharat Karnataka

ಕರ್ನಾಟಕ

karnataka

ETV Bharat / state

ಜಾತಿಗೊಂದು ಮಂಡಳಿಯಿಂದ ಅಭಿವೃದ್ಧಿ ಅಸಾಧ್ಯ: ಶಾಸಕ ಕುಮಾರ್ ಬಂಗಾರಪ್ಪ - BJP MLA Kumar Bangarappa

ಶಾಸಕ ಕುಮಾರ್ ಬಂಗಾರಪ್ಪ ಈಡಿಗ ಸಮುದಾಯದ ಅಭಿವೃದ್ಧಿಗೆ ಮಂಡಳಿ ರಚನೆಯಿಂದ ಜಾತಿಗಳು ಅಭಿವೃದ್ಧಿ ಕಾಣುತ್ತವೆ ಎಂದು ಅನಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

gangavathi
ಶಾಸಕ ಕುಮಾರ್ ಬಂಗಾರಪ್ಪ
author img

By

Published : Feb 6, 2021, 7:27 AM IST

Updated : Feb 6, 2021, 7:39 AM IST

ಗಂಗಾವತಿ:ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರ, ಅಥವಾ ಮಂಡಳಿ ಮಾಡುವುದರಿಂದ ಆಯಾ ಜಾತಿ ಜನಾಂಗದವರು ಯಾವುದೇ ಪ್ರಗತಿ ಸಾಧಿಸುವುದು ಸಾಧ್ಯವಾಗದು ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಹಿಂದುಳಿದ ಈಡಿಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಮಂಡಳಿ ರಚಿಸುವ ಒತ್ತಾಯದ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ಮಂಡಳಿ ರಚನೆಯಿಂದ ಜಾತಿಗಳು ಅಭಿವೃದ್ಧಿ ಕಾಣುತ್ತವೆ ಎಂದು ಅನಿಸುವುದಿಲ್ಲ. ಬದಲಿಗೆ ಜಾತಿ ಜನಾಂಗದ ಆಧಾರದ ಮೇಲೆ ಅವರನ್ನು ಶೈಕ್ಷಣಿಕ, ಔದ್ಯೋಗಿಕವಾಗಿ ಮಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಮ್ಮ ಜನಾಂಗದ ಪರವಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮನವಿ ಮಾಡಿದ್ದೆ. ಬೇಡಿಕೆಗೆ ಸಿಎಂ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ

ಓದಿ:ಬಿಎಸ್​ವೈಗೆ ವಯಸ್ಸಾಗಿದೆ, ರಾಜಕೀಯ ನಿವೃತ್ತಿ ಪಡೆದುಕೊಳ್ಳೋದು ಲೇಸು: ಶಾಸಕ ಯತ್ನಾಳ ಸಿಡಿಮಿಡಿ

ಸಮಾಜದ ಹೆಸರಲ್ಲಿ ಅಥವಾ ನಾರಾಯಣ ಗುರುಗಳ ಹೆಸರಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಾಲೇಜು ಸ್ಥಾಪನೆಗೆ ಯತ್ನಿಸಲಾಗುವುದು ಎಂದರು.

Last Updated : Feb 6, 2021, 7:39 AM IST

ABOUT THE AUTHOR

...view details