ಕರ್ನಾಟಕ

karnataka

ETV Bharat / state

ರಾಮ ಮಂದಿರಕ್ಕೆ ಹನುಮನ ನಾಡಿನಿಂದ ಶಿಲಾಕಂಬ ನೀಡುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ - ಗಂಗಾವತಿಯಿಂದ ಅಯೋಧ್ಯೆಗೆ ಶಿಲಾಕಂಬ

ಪಂಪಾ ಸರೋವರದಲ್ಲಿಂದು ಹನುಮ ಸಹಿತ, ರಾಮ, ಲಕ್ಷ್ಮಣ ಹಾಗೂ ಸೀತಾ ವಿಗ್ರಹಗಳನ್ನಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಾಗಲಿ ಎಂದು ಪುರೋಹಿತರು ಸಂಕಲ್ಪ ಮಾಡಿದರು.

special worship in Pampasarovara
ರಾಮ ಮಂದಿರಕ್ಕೆ ಹನುಮನ ನಾಡಿನಿಂದ ಶಿಲಾಕಂಬ ನೀಡುವ ಕಾರ್ಯಕ್ಕೆ ಇಂದು ವಿಧ್ಯುಕ್ತ ಚಾಲನೆ

By

Published : Oct 27, 2020, 12:39 PM IST

ಗಂಗಾವತಿ:ಅಯೋಧ್ಯೆಯ ಭವ್ಯ ಶ್ರೀರಾಮದೇವರ ದೇಗುಲ ನಿರ್ಮಾಣ ಕಾರ್ಯಕ್ಕೆ ಹನುಮನ ನಾಡಿನಿಂದ ಶಿಲಾಕಂಬಗಳನ್ನು ಕಳಿಸುವ ಕಾರ್ಯಕ್ಕೆ ತಾಲೂಕಿನ ಆನೆಗೊಂದಿ ಸಮೀಪ ಇರುವ ಪಂಪಾ ಸರೋವರದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಪಂಪಾ ಸರೋವರದಲ್ಲಿ ವಿಗ್ರಹಗಳಿಗೆ ವಿಶೇಷ ಪೂಜೆ

ಪಂಪಾ ಸರೋವರದಲ್ಲಿ ಹನುಮ ಸಹಿತ, ರಾಮ, ಲಕ್ಷ್ಮಣ ಹಾಗೂ ಸೀತಾ ವಿಗ್ರಹಗಳನ್ನಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಸಾಗಲಿ ಎಂದು ಪುರೋಹಿತರು ಸಂಕಲ್ಪ ಮಾಡಿದರು.

ಬಳಿಕ ಕಿಷ್ಕಿಂಧೆ ಭಾಗದಿಂದ ಆಯೋಧ್ಯೆಗೆ ಕಳುಹಿಸಲು ಉದ್ದೇಶಿಸಿರುವ ಮಂಟಪಕ್ಕೆ ಬಳಕೆಯಾಗಲಿರುವ ನಾಲ್ಕು ಶಿಲಾಕಂಭಗಳಿಗೆ ಶ್ರೀಗಂಧ ಹಚ್ಚಿ ಪೂಜೆ ಸಲ್ಲಿಸಲಾಯಿತು. ನಂತರ ಹೊಸಪೇಟೆಗೆ ಸಾಗಿಸಿ ಅಲ್ಲಿಂದ ಕಂಟೈನರ್ ಮೂಲಕ ಅಯೋಧ್ಯೆಗೆ ಕಳುಹಿಸಲಾಗುವುದು ಕರಸೇವಕ ಪದ್ಮನಾಭ ತಿಳಿಸಿದ್ದಾರೆ.

ABOUT THE AUTHOR

...view details