ಕೊಪ್ಪಳ: ಇಲ್ಲಿನ ಎಸ್ಪಿ ಟಿ.ಶ್ರೀಧರ್ ಅವರು ನಗರದ ಬಸವೇಶ್ವರ ಸರ್ಕಲ್ನಲ್ಲಿ ರಸ್ತೆಗಿಳಿದು ಖುದ್ದು ಟ್ರಾಫಿಕ್ ನಿಯಂತ್ರಿಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಕಳೆದ ಮೂರು ವರ್ಷಗಳಿಂದ ಕೆಟ್ಟುನಿಂತಿದ್ದ ಸಿಗ್ನಲ್ ಲೈಟ್ಗಳ ದುರಸ್ಥಿ ಕಾರ್ಯ ಮಾಡಿಸಿದ ಅವರು, ಬಳಿಕ ಅಲ್ಲಿಯೇ ಕೆಲಹೊತ್ತು ಟ್ರಾಫಿಕ್ ನಿಯಂತ್ರಿಸಿದರು.
3 ವರ್ಷದಿಂದ ಹಾಳಾಗಿದ್ದ ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್ಪಿ - koppal traffic
ಮೂರು ವರ್ಷದಿಂದ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸದೆ ಹಾಳಾಗಿದ್ದ ಸಿಗ್ನಲ್ಗಳು ಹಾಗೂ ಸಿಸಿ ಟಿವಿಗಳು ಮತ್ತೆ ಕಾರ್ಯಾರಂಭ ಮಾಡಿವೆ..
![3 ವರ್ಷದಿಂದ ಹಾಳಾಗಿದ್ದ ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್ಪಿ SP Fixed traffic signal that has been spoiled from last 3 years](https://etvbharatimages.akamaized.net/etvbharat/prod-images/768-512-9484461-574-9484461-1604907652928.jpg)
ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್ಪಿ
ನಗರದಲ್ಲಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಶ್ರೀಧರ್ ಕೆಲವೇ ದಿನಗಳಲ್ಲಿ ಟ್ರಾಫಿಕ್ ದೀಪಗಳ ದುರಸ್ಥಿಗೆ ಮುಂದಾಗಿದ್ದಾರೆ. ಮೂರು ವರ್ಷದಿಂದ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸದೆ ಹಾಳಾಗಿದ್ದ ಸಿಗ್ನಲ್ಗಳು ಹಾಗೂ ಸಿಸಿ ಟಿವಿಗಳು ಮತ್ತೆ ಕಾರ್ಯಾರಂಭ ಮಾಡಿವೆ.
ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಖುದ್ದು ಟ್ರಾಫಿಕ್ ನಿಯಂತ್ರಿಸಿದ ಎಸ್ಪಿ
ಈ ಮೂಲಕ ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂದೇಶ ರವಾನಿಸಿದ್ದಾರೆ. ಎಸ್ಪಿ ಟಿ. ಶ್ರೀಧರ್ ಅವರಿಗೆ ಡಿವೈಎಸ್ಪಿ ವೆಂಕಟಪ್ಪ ನಾಯಕ, ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ, ಮಹಿಳಾ ಠಾಣೆಯ ಪಿಐ ಮೌನೇಶ್ವರ್ ಮಾಲಿ ಪಾಟೀಲ್ ಹಾಗೂ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ್ ಅವರು ಸಾಥ್ ನೀಡಿದರು.