ಕರ್ನಾಟಕ

karnataka

ETV Bharat / state

ಇಂದಿನಿಂದ ಕೊಪ್ಪಳ ಲಾಕ್​: ವಾಹನ ತಪಾಸಣೆ ನಡೆಸುತ್ತಿರುವ ಎಸ್​ಪಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್

ನಗರದ ಹೊಸಪೇಟೆ ರಸ್ತೆಯಲ್ಲಿ ಸಿಕ್ಕಿಬಿದ್ದ ತ್ರಿಬಲ್ ರೈಡರ್​​ನನ್ನು ಹಿಡಿದು ದಂಡ ಹಾಕುವಂತೆ ಪೊಲೀಸರು ಸೂಚಿಸಿದರು. ದಂಡ ಪಾವತಿಸಲು ಬೈಕ್ ಸವಾರ ಹಿಂದೇಟು ಹಾಕಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು..

koppal
ವಾಹನ ತಪಾಸಣೆ ನಡೆಸುತ್ತಿರುವ ಎಸ್​ಪಿ

By

Published : May 17, 2021, 2:21 PM IST

ಕೊಪ್ಪಳ :ಇಂದಿನಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಅನಗತ್ಯವಾಗಿ ಓಡಾಡುವವರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರು, ಖುದ್ದು ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ವಾಹನ ಸವಾರರು ವ್ಯಾಕ್ಸಿನ್ ಸೇರಿದಂತೆ ಇನ್ನಿತರೆ ಕಾರಣಗಳನ್ನು ಹೇಳುತ್ತಿದ್ದಾರೆ.

ಬೈಕ್​​ಗೆ ಅಂಟಿಸಿದ ಫುಡ್ ಡಿಲೇವರಿ ಸ್ಟಿಕರ್​​ ಕಿತ್ತು ಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅನಗತ್ಯವಾಗಿ ಓಡಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್.. ವಾಹನ ತಪಾಸಣೆ ನಡೆಸುತ್ತಿರುವ ಎಸ್​ಪಿ

ನಗರದ ಹೊಸಪೇಟೆ ರಸ್ತೆಯಲ್ಲಿ ಸಿಕ್ಕಿಬಿದ್ದ ತ್ರಿಬಲ್ ರೈಡರ್​​ನನ್ನು ಹಿಡಿದು ದಂಡ ಹಾಕುವಂತೆ ಪೊಲೀಸರು ಸೂಚಿಸಿದರು. ದಂಡ ಪಾವತಿಸಲು ಬೈಕ್ ಸವಾರ ಹಿಂದೇಟು ಹಾಕಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ನಾವು ಕಿಮ್ಸ್​​ಗೆ ನರ್ಸ್ ಹುದ್ದೆಗೆ ಅರ್ಜಿ ಹಾಕಲು ಹೋಗುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಆದರೆ, ಕಾರಣ ಕೇಳದ ಪೊಲೀಸರು ದಂಡ ಪಾವತಿಸುವಂತೆ ತಿಳಿಸಿದ್ದಾರೆ. ಕೊನೆಗೆ ದಂಡ ಕಟ್ಟದೆ ಬೈಕ್ ಸವಾರರು ನಡೆದುಕೊಂಡು ಹೋಗಿದ್ದಾರೆ.

ಓದಿ:ಕೋವಿಡ್ ಸೋಂಕು ಹೆಚ್ಚಳ: ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್​​

ABOUT THE AUTHOR

...view details