ಕೊಪ್ಪಳ: ಕಂಕಣ ಸೂರ್ಯಗ್ರಹಣದ ಅಂಗವಾಗಿ ನಗರ ಹಾಗೂ ಕಾರಟಗಿಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶಾಂತಿ ಹೋಮಗಳು ನೆರವೇರಿದವು. ಇಲ್ಲಿನ ಜಯನಗರದ ಸತ್ಯನಾರಾಯಣ ದೇಗುಲದಲ್ಲಿ ಬೆಳಗ್ಗೆ 8ಗಂಟೆಯಿಂದಲೇ ಶಾಂತಿಹೋಮ, ಗಣಹೋಮ, ಜಪಹೋಮಗಳು ನೆರವೇರಿದವು. ಗ್ರಹಣದ ಮೋಕ್ಷಕಾಲ ಪ್ರಾಪ್ತವಾಗುವರೆಗೂ ಅಂದರೆ ಹನ್ನೊಂದುವರೆ ವರೆಗೂ ಹೋಮ ನಡೆಯಿತು.
ಕಂಕಣ ಸೂರ್ಯಗ್ರಹಣ: ಗಂಗಾವತಿ, ಕಾರಟಗಿಯಲ್ಲಿ ವಿಶೇಷ ಹೋಮ - ಕಂಕಣ ಸೂರ್ಯಗ್ರಹಣ
ಕಂಕಣ ಸೂರ್ಯಗ್ರಹಣದ ಅಂಗವಾಗಿ ನಗರ ಹಾಗೂ ಕಾರಟಗಿಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶಾಂತಿ ಹೋಮಗಳು ನೆರವೇರಿದವು.
ಕಂಕಣ ಸೂರ್ಯಗ್ರಹಣ: ಗಂಗಾವತಿ, ಕಾರಟಗಿಯಲ್ಲಿ ವಿಶೇಷ ಹೋಮ
ಇನ್ನೂ ಕಾರಟಗಿಯ ಶ್ರೀರಾಘವೇಂದ್ರ ಸ್ವಾಮೀಜಿಗಳ ಮಠದಲ್ಲಿಯೂ ವಿಶೇಷ ಹೋಮ ನಡೆಯಿತು. ಗ್ರಹಣದ ಮೋಕ್ಷಕಾಲದ ಬಳಿಕ ಬಹುತೇಕ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.