ಕರ್ನಾಟಕ

karnataka

ETV Bharat / state

'ಅಂತರ್ಜಾತಿ ವಿವಾಹ ಪ್ರೋತ್ಸಾಹಧನ'ದ ಚೆಕ್‌ಗೆ ಲಂಚ, ಕ್ಲರ್ಕ್ ಅರೆಸ್ಟ್‌ - undefined

ಸರ್ಕಾರದ ಯೋಜನೆಯ ಚೆಕ್ ವಿತರಿಸಲು ಲಂಚ ಪಡೆಯುತ್ತಿದ್ದ ವೇಳೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಕ್ಲರ್ಕ್‌ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಅಧಿಕಾರಿಗಳ ಬಲೆಗೆ

By

Published : Apr 16, 2019, 6:02 PM IST

ಕೊಪ್ಪಳ:ಲಂಚ ಪಡೆಯುತ್ತಿದ್ದ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಕಚೇರಿಯ ಕ್ಲರ್ಕ್ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳದ ಟಣಕನಕಲ್‌ ಗ್ರಾಮದ ಮಂಜುನಾಥ ಬೋವಿ ಎಂಬವರಿಗೆ, ಕ್ಲರ್ಕ್‌ ಜಮದಗ್ನಿ 'ಅಂತರ್ಜಾತಿ ವಿವಾಹ ಪ್ರೋತ್ಸಾಹ' ಯೋಜನೆಯ ಹಣದ ಚೆಕ್ ನೀಡಬೇಕಿತ್ತು. ಈ ಸಂದರ್ಭ ಅವರು 15,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಸಂಬಂಧ ಮಂಜುನಾಥ ಬೋವಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಇವತ್ತುಜಮದಗ್ನಿ 15,000 ರೂ. ಲಂಚ ಪಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಅರೆಸ್ಟ್ ಮಾಡಿದರು.

For All Latest Updates

TAGGED:

ABOUT THE AUTHOR

...view details