ಗಂಗಾವತಿ (ಕೊಪ್ಪಳ) :ಎಸ್ಎಸ್ಎಲ್ಸಿ ಕೊನೆಯ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಗುಲಾಬಿ ಹೂವು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪರೀಕ್ಷೆ ಬಳಿಕವೂ ಸಾಮಾಜಿಕ ಅಂತರ ಮರೆಯದಿರಿ.. ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಶಾಸಕರು - Gangavati koppala latest news
ಕೊರೊನಾದಂತಹ ಸಂದಿಗ್ಧತೆಯಲ್ಲಿಯೂ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆಗಳನ್ನು ಬರೆದಿದ್ದಾರೆ. ಕೊನೆಯ ಪರೀಕ್ಷೆ ಮುಗಿಸುವ ಮಕ್ಕಳ ಖುಷಿಗೆ ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದರು..
Social distance awareness among students
ಕೊರೊನಾದಂತಹ ಸಂದಿಗ್ಧತೆಯಲ್ಲಿಯೂ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆಗಳನ್ನು ಬರೆದಿದ್ದಾರೆ. ಕೊನೆಯ ಪರೀಕ್ಷೆ ಮುಗಿಸುವ ಮಕ್ಕಳ ಖುಷಿಗೆ ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದರು.
ಗ್ರಾಮೀಣ ಭಾಗದ ಹಳ್ಳಿಗಳಾದ ಆರ್ಹಾಳ, ಬಸವಪಟ್ಟಣ ಮೊದಲಾದ ಗ್ರಾಮಗಳಿಗೆ ತೆರಳಿದ ಶಾಸಕರು, ಕೇವಲ ಪರೀಕ್ಷೆ ಮಾತ್ರವಲ್ಲ, ಪರೀಕ್ಷೆ ಮುಗಿದ ಮೇಲೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಿದರು.