ಕರ್ನಾಟಕ

karnataka

ETV Bharat / state

ಜೀತ ಪದ್ಧತಿ ಇನ್ನೂ ಜೀವಂತ... ಜೀತದಾಳುಗಳಿಗೆ ಜಿಲ್ಲಾಡಳಿತದಿಂದ ಮುಕ್ತಿ - undefined

ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರನ್ನು ಜೀತಕ್ಕೆ ಇಟ್ಟುಕೊಳ್ಳಲಾಗಿತ್ತು. ಸ್ಥಳಕ್ಕೆ ದಾಳಿ ಮಾಡಿದ ಜಿಲ್ಲಾಡಳಿತ ಕಾರ್ಮಿಕರನ್ನು ಜೀತದಿಂದ ಮುಕ್ತಗೊಳಿಸಿದರು.

ಜೀತ ಪದ್ಧತಿ

By

Published : Mar 23, 2019, 10:35 AM IST

ಕೊಪ್ಪಳ: ಇಟ್ಟಿಗೆ ಭಟ್ಟಿಯಲ್ಲಿ ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದ ಕುಟುಂಬಗಳನ್ನು ಜಿಲ್ಲಾಡಳಿತ ಮುಕ್ತಿಗೊಳಿಸಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೊಪ್ಪಳ ತಹಶೀಲ್ದಾರರು ಹಾಗೂ ಕಾರ್ಮಿಕ ಇಲಾಖೆ, ಯುನಿಸೆಫ್ ಅಧಿಕಾರಿಗಳು ತಾಲೂಕಿನ ಗಿಣಗೇರಿ ಬಳಿ ಇರುವ ರಮೇಶ ಯಲ್ಲೂರ ಎಂಬುವವರಿಗೆ ಸೇರಿದ ಇಟ್ಟಿಗೆ ಭಟ್ಟಿಯನ್ನು ಪರಿಶೀಲನೆ ನಡೆಸಿದರು.

ಇಟ್ಟಿಗೆ ಭಟ್ಟಿ

ಈ ವೇಳೆ ಒರಿಸ್ಸಾ ಮೂಲದ ಕಾರ್ಮಿಕರನ್ನು ಜೀತದಾಳು ಪದ್ಧತಿಯಲ್ಲಿ ದುಡಿಸಿಕೊಳ್ಳುತ್ತಿರೋದು ಬೆಳಕಿಗೆ ಬಂದಿದೆ. ಒರಿಸ್ಸಾ ಮೂಲದ 58 ಜನರ ಪೈಕಿ 45 ಜನರು ಜೀತದಾಳುಗಳಾಗಿ ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದರು. ಇವರೊಂದಿಗೆ 10 ವರ್ಷದೊಳಗಿನ 13 ಮಕ್ಕಳು ಸಹ ವಾಸವಾಗಿದ್ದರು. ಈ ಎಲ್ಲರನ್ನು ಜಿಲ್ಲಾಡಳಿತ ಜೀತದಿಂದ ಮುಕ್ತಗೊಳಿಸಿದೆ.

ಜೀತದಾಳುಗಳಿಗೆ ಜಿಲ್ಲಾಡಳಿತದಿಂದ ಮುಕ್ತಿ

ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಭಾರತ ದಂಡ ಸಂಹಿತೆ 370 ರನ್ವಯ ಇಟ್ಟಿಗೆ ಭಟ್ಟಿ ಮಾಲೀಕ ರಮೇಶ ಯಲ್ಲೂರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details