ಕರ್ನಾಟಕ

karnataka

ETV Bharat / state

ಅನೈತಿಕ ಚಟುವಟಿಕೆಗಳ ತಾಣವಾಯ್ತು ಮುದೇನೂರು ಶಾಲಾ ಆವರಣ - ಕುಷ್ಟಗಿ ತಾಲೂಕಿನ ಮುದೇನೂರು ಪ್ರಾಥಮಿಕ ಶಾಲೆ

ಕೊರೊನಾ ಹಿನ್ನೆಲೆ ಶಾಲೆ ಬಂದ್​ ಆಗಿರುವುದರಿಂದ ಬೆಳಗ್ಗೆ ಇಸ್ಪೀಟ್ ಆಡುವವರ ಹಾವಳಿ, ಹೊತ್ತೇರುತ್ತಿದ್ದಂತೆ ಕುಡುಕರ ಮೋಜಿಗೆ ಕುಷ್ಟಗಿ ತಾಲೂಕಿನ ಮುದೇನೂರು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಆವರಣ ಬಳಕೆಯಾಗುತ್ತಿದೆ.

Mudenur School
ಅನೈತಿಕ ಚಟುವಟಿಕೆಗಳ ತಾಣ ಮುದೇನೂರು ಶಾಲಾ ಆವರಣ ..

By

Published : Aug 2, 2020, 9:55 AM IST

ಕುಷ್ಟಗಿ: ತಾಲೂಕಿನ ಮುದೇನೂರು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಆವರಣ ಮೋಜು, ಜೂಜುಕೋರರಿಗೆ ಅಡ್ಡೆಯಾಗಿದೆ.

ಅನೈತಿಕ ಚಟುವಟಿಕೆಗಳ ತಾಣ ಮುದೇನೂರು ಶಾಲಾ ಆವರಣ ..

ಕೊರೊನಾ ಹಿನ್ನೆಲೆ ಶಾಲೆ ಬಂದ್​ ಆಗಿರುವುದರಿಂದ ಬೆಳಗ್ಗೆ ಇಸ್ಪೀಟ್ ಹಾವಳಿ, ಹೊತ್ತೇರುತ್ತಿದ್ದಂತೆ ಕುಡುಕರ ಮೋಜಿಗೆ ಈ ಶಾಲೆ ಬಳಕೆಯಾಗುತ್ತಿದೆ. ಶಾಲೆಗೆ ಗೇಟ್ ವ್ಯವಸ್ಥೆ ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆಗಳು ನಿರ್ಭಿತಿಯಿಂದ ನಡೆಯುತ್ತಿವೆ.

ಇನ್ನೂ ಕೆಲವರು ಶಾಲಾ ಆವರಣದಲ್ಲಿ ದನ, ಕುರಿ ಮೇಯಿಸಲು ಹಾಗೂ ಜೆಸಿಬಿ, ಟ್ರಾಕ್ಟರ್ ,ಕಾರು, ಬೈಕ್ ಮತ್ತು ಎತ್ತು, ಎಮ್ಮೆ, ಹಸು ತೊಳೆಯಲು ಇಲ್ಲಿನ ನೀರನ್ನು ಬಳಸುತ್ತಿದ್ದು, ಶಾಲಾ ಆವರಣ‌ ಮತ್ತಷ್ಟು ಗಲೀಜಾಗಿದೆ.

ಈ ಬಗ್ಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ABOUT THE AUTHOR

...view details