ಕೊಪ್ಪಳ :ಕೇವಲ ಆರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಈ ನವ ಜೋಡಿ ಕಾಲಿಟ್ಟಿದೆ.ಲಾಕ್ಡೌನ್ ಹಿನ್ನೆಲೆ ಜಿಲ್ಲೆಯ ಕನಕಗಿರಿ ಪಟ್ಟದಲ್ಲಿ ಸರಳ,ಶಾಸ್ತ್ರೋಕ್ತ
ಬರೀ 6 ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತ ಕಲ್ಯಾಣ.. ಇದು ಸಿಂಪಲ್ಲಾಗ್ ಒಂದ್ ಮದುವೆ!!
ಕನಕಗಿರಿ ಪಟ್ಟಣದ ನಿವಾಸಿ ತಿಪ್ಪಾರೆಡ್ಡಿ ಅವರ ಪುತ್ರ ರಾಜಶೇಖರ್ ರೆಡ್ಡಿ ಹಾಗೂ ರಾಯಚೂರು ಜಿಲ್ಲೆ ಯಾಪಲಪರ್ವಿ ಗ್ರಾಮದ ಅರ್ಚನಾ ಎಂಬುವರ ವಿವಾಹ ಜರುಗಿದೆ.
ದಾಂಪತ್ಯ ಜೀವನಕ್ಕೆ ರಾಜಶೇಖರ್ ಹಾಗೂ ಅರ್ಚನಾ ಕಾಲಿಟ್ಟಿದ್ದಾರೆ. ಕೇವಲ ಆರು ಜನ ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಲಾಕ್ಡೌನ್ ಹಿನ್ನೆಲೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಸಪ್ತಪದಿ ತುಳಿದ ಈ ಜೋಡಿಯ ನಡೆ ಎಲ್ಲರ ಗಮನ ಸೆಳೆದಿದೆ. ಕನಕಗಿರಿ ಪಟ್ಟಣದ ನಿವಾಸಿ ತಿಪ್ಪಾರೆಡ್ಡಿ ಅವರ ಪುತ್ರ ರಾಜಶೇಖರ್ ರೆಡ್ಡಿ ಹಾಗೂ ರಾಯಚೂರು ಜಿಲ್ಲೆ ಯಾಪಲಪರ್ವಿ ಗ್ರಾಮದ ಅರ್ಚನಾ ಎಂಬುವರ ವಿವಾಹ ಜರುಗಿದೆ. ರಾಜಶೇಖರ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದಾರೆ. ಮುಂಚೆಯೇ ಮದುವೆಯ ದಿನಾಂಕ ನಿಗದಿ ಮಾಡಲಾಗಿತ್ತು. ಆಮಂತ್ರಣ ಪತ್ರಗಳನ್ನೂ ಹಂಚಲಾಗಿತ್ತು.
ನಿಗದಿತ ದಿನದಂದು ವಧುವಿನ ಕಡೆಯಿಂದ ಮೂವರು, ವರನ ಕಡೆಯಿಂದ ಮೂವರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.