ಕೊಪ್ಪಳ: ಗಾಂಧೀಜಿ ಅವರನ್ನು ಕೊಂದ ಗೋಡ್ಸೆನ ಭಾವಚಿತ್ರಕ್ಕೆ ಬಿಜೆಪಿ ಅವರು ಪೂಜೆ ಮಾಡುತ್ತಾರೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟ ಪಕ್ಷವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತವರು ಕಾಂಗ್ರೆಸ್ ನವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಆರ್‌ಎಸ್‌ಎಸ್ ಹೇಳಿದ್ದೇ ಕಾನೂನಾಗುತ್ತದೆಯೇ? ಮುಸ್ಲಿಮರಿಗೆ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಲು ಅವರು ಯಾರು? ಯತ್ನಾಳ್ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದರು.
ಒಳ ಮೀಸಲಾತಿಗೆ ಎಲ್ಲರ ಒಮ್ಮತವಿಲ್ಲ. ಲಂಬಾಣಿ, ಭೋವಿ ಸಮುದಾಯಗಳು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಒಳಮೀಸಲಾತಿ ನೀಡುವುದು ಕಷ್ಟವಾಗಲಿದೆ ಎಂದ ಅವರು, ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಅವಕಾಶ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ ಎಂದರು.
ಈಶ್ವರಪ್ಪ ಯಾವ ಖುಷಿಗೆ ರಾಜಿನಾಮೆ ಕೊಟ್ಟ:ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ನನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಂಡ ಇದರಿಂದ ಈಶ್ವರಪ್ಪ ರಾಜಿನಾಮೆಕೊಟ್ಟ. ಈಶ್ವರಪ್ಪ ರಾಜಿನಾಮೇ ಕೊಟ್ಟಿದ್ದು ಖುಷಿಗಲ್ಲ ತಪ್ಪಮಾಡಿದ್ದಕ್ಕೆ. ಶೇ.40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಸಿಎಂ, ರಾಜ್ಯಪಾಲರನ್ನು ಭೇಟಿಯಾಗಿ ಪಿಎಂಗೆ ಪತ್ರ ಬರೆದು ನ್ಯಾಯಾಂಗ ತನಿಖೆ ನಡೆಸಲು ಕೋರಿದ್ದಾರೆ. ಆದರೆ, ಸರ್ಕಾರ ದಾಖಲಾತಿ ಕೇಳುತ್ತಿದೆ.
ನನ್ನ ಅವಧಿಯಲ್ಲಿ ಆರೋಪಗಳು ಕೇಳಿ ಬಂದಾಗ ದಾಖಲಾತಿ ಕೇಳದೇ ಸಿಬಿಐಗೆ ವಹಿಸಿದ್ದೆನು. ಡಿ.ಸಿ.ರವಿ, ಗಣಪತಿ, ಲಾಟರಿ, ಮೆಸ್ತಾ, ಸೌಜನ್ಯ ಸೇರಿ ಹಲವು ಪ್ರಕರಣ ಸಿಬಿಐಗೆ ವಹಿಸಿದ್ದೆ. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಈಗೀರುವ ಡಬಲ್ ಇಂಜಿನ್ ಸರಕಾರ ನಡೆದುಕೊಳ್ಳುವ ರೀತಿ ಜನರಿಗೆ ಅನುಮಾನ ಮೂಡಿಸಿದೆ. ಬಾಯಿ ಬಿಟ್ಟರೆ ಬಿಜೆಪಿ ಸುಳ್ಳು ಹೇಳುತ್ತದೆ ಎಂದು ಆರೋಪಿಸಿದರು.