ಕರ್ನಾಟಕ

karnataka

ETV Bharat / state

ಅಹಿಂದ ವೋಟ್ ಡಿಲಿಷನ್ ಬಿಜೆಪಿಗರ ಕುತಂತ್ರ: ಸಿದ್ದರಾಮಯ್ಯ ವಾಗ್ದಾಳಿ

ಮತದಾರರ ಮಾಹಿತಿ ಹಗರಣದಲ್ಲಿ ಬಿಜೆಪಿ ಸರ್ಕಾರ ಅಹಿಂದ ಮತದಾರರನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ.

voters information leak
ಮಾಜಿ ಸಿಎಂ ಸಿದ್ದರಾಮಯ್ಯ

By

Published : Nov 20, 2022, 8:28 PM IST

ಕೊಪ್ಪಳ: ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಯಾವ ಕ್ಷೇತ್ರದಲ್ಲಿ ಸೋಲು ಎಂಬುದು ಗೊತ್ತಾಗಿದೆ. ಅದಕ್ಕಾಗಿ ಅಲ್ಲಿರುವ ಅಹಿಂದ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮತದಾರರ ಮಾಹಿತಿಗಳನ್ನು ಕಳ್ಳತನ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಿದೆ. 28 ಕ್ಷೇತ್ರಗಳಲ್ಲಿ ಡಿಲಿಷನ್, ಆಡಿಷನ್ ಮಾಡಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 50 ಸಾವಿರದಿಂದ 60 ಸಾವಿರ ಮತದಾರರನ್ನು ಅಳಿಸಿ ಹಾಕಿದ್ದಾರೆ. ಸದ್ಯ ಬೆಂಗಳೂರ ನಗರದ ಉಸ್ತುವಾರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರೇ ವಹಿಸಿಕೊಂಡಿದ್ದು, ಇದಕ್ಕೆ ಸ್ಪಷ್ಟ ಉತ್ತರವನ್ನು ಅವರೇ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಇಲಾಖೆಯಲ್ಲಿ ಅಕ್ರಮ ನಡೆದರೆ ಯಾರು ಜವಾಬ್ದಾರರು?: ಸರ್ಕಾರವು ಬಿಎಲ್ಓ(ಮತಗಟ್ಟೆ ಅಧಿಕಾರಿ) ಗಳನ್ನಾಗಿ ಖಾಸಗಿ ಜನರನ್ನು ನೇಮಿಸಿದೆ. ಕಾನೂನು ಪ್ರಕಾರ ಖಾಸಗಿಯವರನ್ನು ಬಿಎಲ್ಓ ಗಳನ್ನಾಗಿ ಮಾಡಲು ಬರುವುದಿಲ್ಲ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮಖದಲ್ಲಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಮತದಾರರ ಮಾಹಿತಿಗೆ ಕನ್ನ ಆರೋಪ.. ಚಿಲುಮೆ ಆ್ಯಪ್ ಡೆವಲಪರ್​ ಪೊಲೀಸ್​ ವಶಕ್ಕೆ

ABOUT THE AUTHOR

...view details