ಕರ್ನಾಟಕ

karnataka

ETV Bharat / state

ಶ್ರೀಕಿ ನಾಪತ್ತೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಸಿಡಿಮಿಡಿ - Bitcoin scam

ರಾಜ್ಯದಲ್ಲಿ ಬಿಟ್​ ಕಾಯಿನ್​ ಹಗರಣ(Bitcoin scam) ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂದು ಜನಸ್ವರಾಜ್​ ಯಾತ್ರೆ (CM Basavaraj Bommai jana swaraj yatra) ಉದ್ಘಾಟನೆ ಮಾಡಲು ಕೊಪ್ಪಳಕ್ಕೆ ಸಿಎಂ ಬೊಮ್ಮಾಯಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶ್ರೀಕಿ ನಾಪತ್ತೆ(Shriki Missing case) ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮುಖ್ಯಮಂತ್ರಿಗಳು ಗರಂ ಆದರು.

cm-basavaraj-bommai-angry-on-media
ಸಿಎಂ ಬಸವರಾಜ ಬೊಮ್ಮಾಯಿ

By

Published : Nov 18, 2021, 2:07 PM IST

Updated : Nov 18, 2021, 3:38 PM IST

ಕೊಪ್ಪಳ: ಬಿಟ್ ಕಾಯಿನ್ ಹಗರಣದ(Bitcoin scam) ಆರೋಪಿ ಶ್ರೀಕಿ ನಾಪತ್ತೆ(Shriki missing case) ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡ (CM Basavaraj Bommai) ಘಟನೆ ನಗರದಲ್ಲಿ ನಡೆಯಿತು.

ಶ್ರೀಕಿ ನಾಪತ್ತೆ ಕುರಿತ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಸಿಡಿಮಿಡಿ

ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನಸ್ವರಾಜ್ ಸಮಾವೇಶ(jana swaraj yatra)ದಲ್ಲಿ ಪಾಲ್ಗೊಳ್ಳಲು ಸಿಎಂ ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್​ಪೋರ್ಟ್​ಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜನ ಸ್ವರಾಜ್ ಯಾತ್ರೆಗಾಗಿ ಇಲ್ಲಿಗೆ ಬಂದಿದ್ದೇವೆ. ನಾಲ್ಕು ತಂಡಗಳ ಪೈಕಿ ಒಂದು ತಂಡದ ನೇತೃತ್ವದಲ್ಲಿ ನಾನು ಯಾತ್ರೆಯನ್ನು ಉದ್ಘಾಟನೆ ಮಾಡುತ್ತಿದ್ದೇನೆ ಎಂದರು.

ಮಾಧ್ಯಮದವರ ಮೇಲೆ ಸಿಎಂ ಗರಂ:ಶ್ರೀಕಿ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಸಿಡಿಮಿಡಿಗೊಂಡರು. ಪೊಲೀಸ್ ಇಲಾಖೆ ಇದೆ ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಬೆಳೆ ಹಾನಿ ಸಮೀಕ್ಷೆ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಕುರಿತಂತೆ ನಿನ್ನೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಹಾನಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಕೆಗೆ ಸೂಚಿಸಿದ್ದೇನೆ. ವರದಿಯಾಧರಿಸಿ ಸರ್ಕಾರ ಪರಿಹಾರ ನೀಡುತ್ತದೆ. ಈಗ ವಿಧಾನ ಪರಿಷತ್ ಚುನಾವಣೆ ಇದ್ದು, ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಹಾಗಂತ ಸರ್ಕಾರದ ಕೆಲಸ ನಿಂತಿಲ್ಲ. ಸರ್ಕಾರದ ಕೆಲಸದ ಜೊತೆಗೆ ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

Last Updated : Nov 18, 2021, 3:38 PM IST

ABOUT THE AUTHOR

...view details