ಕರ್ನಾಟಕ

karnataka

ETV Bharat / state

ಮುಕ್ತಿ ವಾಹನದ ವ್ಯವಸ್ಥೆ.. ಸಮಾಜ ಮೆಚ್ಚುವ ಸೇವೆ ಮಾಡುತ್ತಿರುವ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್​.. - Veerashaiva Lingayata Seva Trust

ಬಹು ದಿನಗಳ ಕನಸು ಇದೀಗ ಈಡೇರಿದೆ. ಕುಟುಂಬದಲ್ಲಿ ತಂದೆ ಸತ್ತರೂ, ಮಕ್ಕಳು ತಂದೆ ಶವ ಮುಟ್ಟುವುದಿಲ್ಲ, ಸಮಾಜದವರೇ ಮುಂದಾಗುತ್ತಿರುವ ಸಂಪ್ರದಾಯದಲ್ಲಿದ್ದೇವೆ..

kushtagi
ಮುಕ್ತಿ ವಾಹನದ ಪೂಜೆ ನೆರವೇರಿಸಿದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ

By

Published : Aug 3, 2020, 6:50 PM IST

ಕುಷ್ಟಗಿ(ಕೊಪ್ಪಳ):ರುದ್ರಭೂಮಿಗೆ ಶವ ಸಾಗಿಸಲು ಮುಕ್ತಿ ವಾಹನದ ವ್ಯವಸ್ಥೆಯನ್ನ ಮಾಡುವುದು ಮಠಮಾನ್ಯಗಳ ಕೆಲಸ. ಆದರೆ, ಕುಷ್ಟಗಿಯ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್​​ಮುಕ್ತಿ ವಾಹನದ ವ್ಯವಸ್ಥೆ ಮಾಡಿರುವುದು ಸಮಾಜ ಮೆಚ್ಚುವ ಕೆಲಸ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನೂತನ ಮುಕ್ತಿ ವಾಹನದ ಪೂಜೆ ನೆರವೇರಿಸಿದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ

ಇಲ್ಲಿನ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸೇವಾ ಟ್ರಸ್ಟ್​​ನ ನೂತನ ಮುಕ್ತಿ ವಾಹನದ ಪೂಜೆ ನೆರವೇರಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್​​ನ ಸ್ತುತ್ಯಾರ್ಹ ಸೇವೆ ಸುವರ್ಣಾಕ್ಷರದಿಂದ ಬರೆದಿಡುವಂತದ್ದಾಗಿದೆ. ಬಹು ದಿನಗಳ ಕನಸು ಇದೀಗ ಈಡೇರಿದೆ. ಕುಟುಂಬದಲ್ಲಿ ತಂದೆ ಸತ್ತರೂ, ಮಕ್ಕಳು ತಂದೆ ಶವ ಮುಟ್ಟುವುದಿಲ್ಲ, ಸಮಾಜದವರೇ ಮುಂದಾಗುತ್ತಿರುವ ಸಂಪ್ರದಾಯದಲ್ಲಿದ್ದೇವೆ. ವೀರಶೈವ ಧರ್ಮ ಎಲ್ಲಾ ಧರ್ಮಗಳನ್ನು ಅಪ್ಪಿಕೊಳ್ಳುವ ಧರ್ಮವಾಗಿದೆ ಎಂದರು.

ಮಾಜಿ ಶಾಸಕ ಕೆ.ಶರಣಪ್ಪ, ಅಮರೇಶ್ವರ ಶೆಟ್ಟರ್, ದೊಡ್ಡಬಸವ ಬಯ್ಯಾಪೂರ, ದೇವೇಂದ್ರಪ್ಪ ಬಳೂಟಗಿ, ವೀರಶೈವ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರವಿಕುಮಾರ ಹಿರೇಮಠ, ಅಧ್ಯಕ್ಷ ಮಲ್ಲಿಕಾರ್ಜುನ ಮಸೂತಿ ಸೇರಿ ಸರ್ವ ಸಮಾಜದ ಅಧ್ಯಕ್ಷರು ಪಾಲ್ಗೊಂಡಿದ್ದರು.

ABOUT THE AUTHOR

...view details