ಕರ್ನಾಟಕ

karnataka

ETV Bharat / state

ಪೌರಕಾರ್ಮಿಕರಿಗೆ ಉಪಹಾರ ಬಡಿಸಿ ಸರಳತೆ ಮೆರೆದ ಗವಿಶ್ರೀ! - ಶ್ರೀಗಳು ಬಂದು ಉಪಹಾರ ಕಾರ್ಮಿಕರಿಗೆ

ಜಾತ್ರೆಯ ಸಮಯದಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ಅಪಾರವಾದ ಶ್ರಮವಹಿಸಿ ಸ್ವಚ್ಛತೆ ಕಾಪಾಡಿದ ಪೌರ ಕಾರ್ಮಿಕರಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದರು. ಅಲ್ಲದೇ ಇಂದು ಬೆಳಗ್ಗೆ ಸ್ವತಃ ಶ್ರೀಗಳು ಬಂದು ಕಾರ್ಮಿಕರಿಗೆ ಉಪಹಾರ ಬಡಿಸಿದ್ರು.

Shri Gavisiddeshwara Swamiji
ಪೌರಕಾರ್ಮಿಕರಿಗೆ ಉಪಹಾರ ಬಡಿಸಿ ಸರಳತೆ ಮೆರೆದ ಗವಿಶ್ರೀ

By

Published : Jan 16, 2020, 11:52 AM IST

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವಚ್ಚತಾ ಕೆಲಸ ಮಾಡಿದ ಪೌರ ಕಾರ್ಮಿಕರಿಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉಪಹಾರ ಬಡಿಸಿದ್ದಾರೆ.

ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಪೌರ ಕಾರ್ಮಿಕರ ಕೆಲಸವನ್ನು ಮೆಚ್ಚಿ ತಾವೇ ಸ್ವತಃ ಉಪಹಾರ ಬಡಿಸಿ ಸರಳತೆ ಮೆರೆದಿದ್ದಾರೆ. ಕಳೆದ ಒಂದು ವಾರದಿಂದ ಜಾತ್ರೆಯಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ಅಪಾರವಾದ ಶ್ರಮವಹಿಸಿ ಸ್ವಚ್ಛತೆ ಕಾಪಾಡಿದ ಪೌರ ಕಾರ್ಮಿಕರಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದರು.

ಪೌರಕಾರ್ಮಿಕರಿಗೆ ಉಪಹಾರ ಬಡಿಸಿ ಸರಳತೆ ಮೆರೆದ ಗವಿಶ್ರೀ

ಅಲ್ಲದೆ, ಇಂದು ಬೆಳಗ್ಗೆ ಸ್ವತಃ ಶ್ರೀಗಳು ಬಂದು ಉಪಹಾರ ಬಡಿಸಿದ್ದನ್ನು ಕಂಡು ಪೌರ ಕಾರ್ಮಿಕರ ಭಕ್ತಿಯ ಜೊತೆಗೆ ಸಂತೋಷವೂ ಇಮ್ಮಡಿಯಾಯಿತು. ಸುಮಾರು 30ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಶ್ರೀಗಳು ಉಪಹಾರ ಬಡಿಸಿ ಸರಳತೆ ಮೆರೆದರು. ನಗರ ಪೊಲೀಸ್ ಠಾಣೆಯ ಪಿಐ ಮೌನೇಶ್ಚರ ಮಾಲಿಪಾಟೀಲ್ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details