ಕೊಪ್ಪಳ:ಜಿಲ್ಲೆಯ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಇದೇ ಮೊದಲ ಬಾರಿಗೆ ಬ್ರಾಹ್ಮಿ ಮಹೂರ್ತದಲ್ಲಿ ಜರುಗಿದೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಇಂದು ಬೆಳಗಿನ ಜಾವ 4.30 ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಅತ್ಯಂತ ಸರಳವಾಗಿ ರಥೋತ್ಸವ ನಡೆದಿದೆ.
ಕೊರೊನ 3ನೇ ಅಲೆ ಹಿನ್ನೆಲೆ ಸರ್ಕಾರ ಜಾತ್ರೆಗಳಿಗೆ ನಿರ್ಬಂಧ ವಿಧಿಸಿದೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಸುಮಾರು 4 ರಿಂದ 5 ಲಕ್ಷ ಜನರು ಸೇರುತ್ತಿದ್ದರು. ಪ್ರತಿ ವರ್ಷವೂ ಸಂಜೆಯ ವೇಳೆ ಮಹಾರಥೋತ್ಸವ ಜರುಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರಬಾರದು ಎಂಬ ಉದ್ದೇಶದಿಂದ ಈ ಬಾರಿ ರಥೋತ್ಸವದ ಸಮಯವನ್ನು ಕೊನೆ ಕ್ಷಣದವರೆಗೂ ಶ್ರೀ ಗವಿಮಠ ಅತ್ಯಂತ ಗುಪ್ತವಾಗಿಟ್ಟು ಮಹಾರಥೋತ್ಸವ ನಡೆಸಿದೆ.