ಗಂಗಾವತಿ: ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆಯಲು ಜನರು ನಿತ್ಯ ಪರದಾಡುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.
ಬೇಡಿಕೆ ಇದ್ದಷ್ಟು ಲಸಿಕೆ ಪೂರೈಕೆಯಾಗದ ಹಿನ್ನೆಲೆ ಲಸಿಕೆಗಳ ಕೊರತೆಯಿಂದಾಗಿ ಜನರು ನಿತ್ಯವೂ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಬಂದು ಲಸಿಕೆ ಪಡೆಯದೇ ಮರಳಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಗೆ ಕೋವಿಶೀಲ್ಡ್ ಲಸಿಕೆ ಬೆರಳೆಣಿಕೆಯಷ್ಟು ಮಾತ್ರ ಪೂರೈಕೆಯಾಗಿತ್ತು. ಕೇವಲ ನೂರು ಜನರಿಗೆ ಆಗುವಷ್ಟು ಮಾತ್ರ ಲಸಿಕೆ ಪೂರೈಕೆಯಾಗಿದ್ದು, ಕೆಲವೇ ಗಂಟೆಯಲ್ಲಿ ಅದು ಮುಗಿದು ಹೋಗಿದೆ.