ಕರ್ನಾಟಕ

karnataka

ETV Bharat / state

ಅಭಿನಂದನೆಗೆ ಶಾಲು-ಹಾರ, ಹುಟ್ಟುಹಬ್ಬಕ್ಕೆ ಕೇಕ್​ ಕಟ್​ ಬೇಡ: ಪ್ರೀತಿಯಿಂದ ಪುಸ್ತಕ ನೀಡಿ - ಸಚಿವ ಶಿವರಾಜ ತಂಗಡಗಿ - ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ

ಶಾಲು - ಹಾರ ಸ್ಮರಣಿಕೆಗಳನ್ನು ತರುವ ಬದಲು ಪುಸ್ತಕಗಳನ್ನು ತರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ ತಂಗಡಗಿ

By

Published : Jun 5, 2023, 10:46 AM IST

Updated : Jun 5, 2023, 1:00 PM IST

ಸಚಿವ ಶಿವರಾಜ ತಂಗಡಗಿ

ಗಂಗಾವತಿ: ನಾನು ಮಂತ್ರಿಯಾದ ಬಳಿಕ ನನ್ನ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಅಭಿನಂದಿಸುವ ನೆಪದಲ್ಲಿ ಶಾಲು-ಹಾರ, ಸ್ಮರಣಿಕೆಗಳನ್ನು ತರುತ್ತಿದ್ದು, ಇದರಿಂದ ನನಗೆ ತೀವ್ರ ನೋವಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾರಟಗಿ ಪಟ್ಟಣದ ತಮ್ಮ ನಿವಾಸದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಕ್ಕ ಬಳಿಕ ತಕ್ಷಣಕ್ಕೆ ನಾನು ನಿರ್ಧಾರ ಮಾಡಿದ್ದು ಎಂದರೆ ಯಾವುದೇ ಕಾರಣಕ್ಕೂ ನಾನು ಸನ್ಮಾನಕ್ಕೆ ಶಾಲು-ಹಾರ ತುರಾಯಿ ಪಡೆಯಬಾರದು ಎಂದು.

ಆದರೆ, ಜನ ನನ್ನ ಮನವಿ ಮೀರಿಯೂ ಶಾಲು-ಹಾರ ತರುತ್ತಿದ್ದಾರೆ. ಒಂದು ಟ್ರ್ಯಾಕ್ಟರಿಯಷ್ಟು ಹಾರ-ಹೂವಿನಬೊಕ್ಕೆ ತುರಾಯಿಗಳನ್ನು ಬೇರೆಡೆಗೆ ಕಳಿಸಿದ್ದೇನೆ. ಇದರಿಂದ ಯಾವ ಪ್ರಯೋಜನವಿಲ್ಲ, ಹಣ ವ್ಯರ್ಥ. ಅದರ ಬದಲಿಗೆ ಒಂದು ಪುಸ್ತಕ ನೀಡುವಂತೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಶಾಲು-ಹಾರ ತರದಂತೆ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಜನರಿಗೆ ಮನವಿ ಮಾಡಿಕೊಂಡಿದ್ದೇನೆ.

ಇದನ್ನೂ ಓದಿ:2 ಲಕ್ಷಕ್ಕೂ ಅಧಿಕ ಗಿಡ ನೆಟ್ಟು ವೃಕ್ಷ ಕ್ರಾಂತಿ: ಇದು ಪರಿಸರವಾದಿ ಶಿವಾಜಿ ಕಾಗಣಿಕರ್ ಅವರ ಯಶಸ್ಸಿನ ಕಥೆ

ಇದರ ಬದಲು ಒಂದೇ ಒಂದು ಪುಸ್ತಕ, ಪೆನ್ ಅಥವಾ ನೋಟ್​ ಕೊಟ್ಟರೆ ಅವುಗಳನ್ನು ಕ್ಷೇತ್ರದ ಬಡ ಮಕ್ಕಳಿಗೆ ನೀಡುತ್ತೇನೆ. ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಇಡುತ್ತೇನೆ. ಜೂನ್ 10 ರಂದು ನನ್ನ ಹುಟ್ಟುಹಬ್ಬವಿದೆ. ಅಂದು ಯಾವುದೇ ಕಾರಣಕ್ಕೂ ಶಾಲು-ಹಾರ, ತುರಾಯಿ ಸನ್ಮಾನ ಸ್ವೀಕರಿಸುವುದಿಲ್ಲ. ಅಭಿಮಾನಿಗಳು ಯಾರೂ ಕೇಕ್ ತರಬಾರದು, ತಂದರೂ ಕೇಕ್ ಕಟ್ ಮಾಡುವುದಿಲ್ಲ. ಬದಲಿಗೆ ನನ್ನ ಮೇಲೆ ಅಭಿಮಾನವಿದ್ದರೆ ಗಿಡಗಳನ್ನು ನೆಟ್ಟು ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿದರು.

ಹತ್ತು ರೂಪಾಯಿ ಮೌಲ್ಯದ ಒಂದೇ ಪುಸ್ತಕ ನೀಡಿ ಸಾಕು ಎಂದು ಮನವಿ ಮಾಡಿದರೂ ಜನ ಕೇಳುತ್ತಿಲ್ಲ. ಶಾಲು-ಹಾರದ ಮೇಲೊಂದು ಪುಸ್ತಕ ತಂದು ಕೊಡುತ್ತಿದ್ದಾರೆ. ಇದರಿಂದ ನನಗೆ ತೀವ್ರ ಮುಜುಗರವಾಗುತ್ತಿದೆ. ಬಂದ ಪುಸ್ತಕಗಳಲ್ಲಿ ನನಗೆ ಹಿಡಿಸಿದನ್ನು ನಾನು ಓದಲು ಇಟ್ಟುಕೊಳ್ಳುತ್ತೇನೆ. ಇಲ್ಲವೇ ಬೇರೆಯವರಿಗೆ ಓದಲು ನೀಡುತ್ತೇನೆ.

ಇಲ್ಲವೇ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳಿಗೆ ಅಥವಾ ಗ್ರಂಥಾಲಯದಲ್ಲಿ ಇಡುವ ಕೆಲಸ ಮಾಡುತ್ತೇನೆ. ಪುಸ್ತಕದ ಸಂಸ್ಕೃತಿ ಬೆಳೆಯುವುದರಿಂದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು ಹೆಚ್ಚು ಖರೀದಿಯಾದಂತೆ ಪ್ರಾಧಿಕಾರದ ವ್ಯಾಪ್ತಿಯ ಕವಿಗಳು, ಸಾಹಿತಿಗಳನ್ನು ಪ್ರೋತಾಹಿಸಿದಂತಾಗುತ್ತದೆ. ಸಾವಿರಾರು ಬರಹಗಾರರ, ಲೇಖಕರ ಜೀವನ ಸಾಗುತ್ತದೆ. ಅಲ್ಲದೇ ಮುದ್ರಣ ಘಟಕಗಳು ಅಭಿವೃದ್ಧಿಯಾಗುತ್ತವೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಆರ್ಥಿಕ ಸಂಕಷ್ಟದ ನಡುವೆಯೂ ಹೊಸದಾಗಿ 50 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಮುಂದಾದ ಪಾಲಿಕೆ

ಇದನ್ನೂ ಓದಿ:ನನ್ನ ರಾಜಕೀಯ ಜೀವನದಲ್ಲಿ ಗೆಲುವು ಸಾಧಿಸಿದ್ದಕ್ಕಿಂತ ಸೋಲಿನ ಕಹಿ ಅನುಭವವೇ ಹೆಚ್ಚು: ಮಧು ಬಂಗಾರಪ್ಪ

Last Updated : Jun 5, 2023, 1:00 PM IST

ABOUT THE AUTHOR

...view details