ಕೊಪ್ಪಳ: ನಮ್ಮ ರಾಜ್ಯದ ಸಂಸದರು ತಾಕತ್ ಇದ್ರೆ ಪ್ರಧಾನಿ ಮೋದಿ ಜೊತೆ ಫೋಟೋ ತೆಗೆಸಿಕೊಳ್ಳಲಿ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಸವಾಲ್ ಹಾಕಿದ್ದಾರೆ.
ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಇಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಜ್ಯದ ಸಂಸದರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. 200 ಮೀಟರ್ ದೂರ ನಿಲ್ಲಿಸುತ್ತಾರೆ. ಮೋದಿಗೆ ನಮ್ಮ ರಾಜ್ಯದ ಸಂಸದರೆಂದರೆ ಕಾಳಜಿ ಇಲ್ಲ. ರಾಜ್ಯದ ಸಂಸದರು ಕೆಲಸ ಮಾಡುವುದು ಬೇಡ. ಒಬ್ಬೊಬ್ಬರೇ ಹೋಗಿ ಫೋಟೋ ತೆಗೆಸಿಕೊಂಡು ಬನ್ನಿ ಎಂದು ಹೇಳಿದರು.