ಕರ್ನಾಟಕ

karnataka

ETV Bharat / state

ತಂಗಡಗಿ ಯಡವಟ್ಟು ಮಾತನಾಡಿ ಪ್ರಚಾರ ತೆಗೆದುಕೊಳ್ಳುವ ವ್ಯಕ್ತಿ: ಶಾಸಕರ ಆರೋಪ - ಶಾಸಕ‌ ಬಸವರಾಜ ದಡೇಸೂಗೂರು

ಜನ ಮರೆತು ಹೋದ ಸಂದರ್ಭದಲ್ಲಿ ಕೆಲ ಲೀಡರ್​​ಗಳು ಯಡವಟ್ಟು ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಮಾಜಿ ಸಚಿವ ಶಿವರಾಜ ತಂಗಡಗಿ ಸಹ ಅದೇ‌ ಕೆಟಗರಿಗೆ ಸೇರಿದ ವ್ಯಕ್ತಿ ಎಂದು ಶಾಸಕ‌ ಬಸವರಾಜ ದಡೇಸೂಗೂರು ಟೀಕಿಸಿದ್ದಾರೆ.

ಶಾಸಕ‌ ಬಸವರಾಜ ದಡೇಸೂಗೂರು
ಶಾಸಕ‌ ಬಸವರಾಜ ದಡೇಸೂಗೂರು

By

Published : Apr 17, 2020, 9:21 PM IST

ಕೊಪ್ಪಳ:ಮಾಜಿ ಸಚಿವ ಶಿವರಾಜ ತಂಗಡಗಿ ಯಡವಟ್ಟು ಮಾತನಾಡಿ ಪ್ರಚಾರ ತೆಗೆದುಕೊಳ್ಳುವ ಕ್ಯಾಟಗರಿಗೆ ಸೇರಿದ ವ್ಯಕ್ತಿ ಎಂದು ಕನಕಗಿರಿ ಕ್ಷೇತ್ರದ ಶಾಸಕ‌ ಬಸವರಾಜ ದಡೇಸೂಗೂರು ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಮರೆತು ಹೋದ ಸಂದರ್ಭದಲ್ಲಿ ಕೆಲ ಲೀಡರ್​​ಗಳು ಯಡವಟ್ಟು ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಇವರು ಸಹ ಅದೇ‌ ಕೆಟಗರಿಗೆ ಸೇರಿದ ವ್ಯಕ್ತಿ ಎಂದು ಟೀಕಿಸಿದರು.

ಶಾಸಕ‌ ಬಸವರಾಜ ದಡೇಸೂಗೂರು

ಇನ್ನು ನಮ್ಮ ಜನರು ಅವರಿಗೆ 10 ವರ್ಷ ಅಧಿಕಾರ ನೀಡಿದ್ದರು. ಜನರಿಗೆ, ರೈತರಿಗೆ ಆಗ ಏನು ಮಾಡಿದರು. ಜಲಾಶಯದಲ್ಲಿದ್ದ 2 ಟಿಎಂಸಿ ನೀರನ್ನು ನಾವು ಬಳಸಿಕೊಳ್ಳಲು ಆಗ ಆಗಲಿಲ್ಲ. ನನಗೆ ಜನರು ಆಶೀರ್ವಾದ ಮಾಡಿ ಎರಡು ವರ್ಷವಾಯಿತು. ಜನರಿಗೆ, ರೈತರಿಗೆ ಅನುಕೂಲವಾದ ಕೆಲಸ ಮಾಡಿದ್ದೇವೆ.

ರೈತರಿಗೆ ಯಾವ ಟೈಂಗೆ ನೀರು, ವಿದ್ಯುತ್ ಒಸಗಿಸಬೇಕು, ಜನರಿಗೆ ಏನು ಬೇಕು ಎಂದು ನಮ್ಮ ಸಿಎಂಗೆ ಗೊತ್ತಿದೆ. ಹೀಗಾಗಿ ಅನುಕೂಲ ಮಾಡ್ತಾರೆ. ಇನ್ನು ತಂಗಡಗಿ ಬಗ್ಗೆ ಮಾತನಾಡೋದು ಟೈಂ ವೇಸ್ಟ್, ರೈತರ ಬಗ್ಗೆ ಏನಾದರೂ ಕೇಳಿ ಹೇಳ್ತಿನಿ ಎಂದು ಶಾಸಕ ಬಸವರಾಜ ದಡೇಸೂಗೂರು ಟಾಂಗ್​ ಕೊಟ್ಟರು.

ABOUT THE AUTHOR

...view details