ಗಂಗಾವತಿ :ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಹಾಗೂ ಜನರಿಗೆ ತೆರಿಗೆಗಳ ಹೊರೆಯ ಮೂಲಕ ಇನ್ನಿಲ್ಲದ ಸಮಸ್ಯೆ ಸೃಷ್ಟಿಸುತ್ತಿರುವ ಬಿಜೆಪಿ ಪಕ್ಷ ಅನ್ಫಿಟ್ ಫಾರ್ ರೂಲಿಂಗ್ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಛೇಡಿಸಿದರು. ನಗರದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ನಾಯಕರಿಗೆ, ಆಡಳಿತ ನಡೆಸುವವರಿಗೆ ಸರಿಯಾದ ದೃಷ್ಟಿಕೋನ, ಜನಪರ ಕಾಳಜಿ ಇಲ್ಲ. ಹೀಗಾಗಿ, ಅಧಿಕಾರಕ್ಕೆ ಬಂದರೆ ಏನು ಆಗಬಾರದೋ ಅದೇ ಆಗೋದು ಎಂದು ಆರೋಪಿಸಿದರು.
ತೈಲ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಬಿಎಸ್ವೈ ಸಿಎಂ ಆದಾಗ ಪಕ್ಷದಲ್ಲಿ ಗೊಂದಲ ಇರುತ್ತದೆ. ಶಾಸಕರಲ್ಲಿ ಗುಂಪುಗಾರಿಕೆ ಇರುತ್ತದೆ. ಇದೆಲ್ಲವನ್ನು ಗಮನಿಸಿದರೆ ಬಿಎಸ್ವೈಗೆ ಪಕ್ಷದ ಹಾಗೂ ಶಾಸಕರ ಮೇಲೆ ಹಿಡಿತ ಇಲ್ಲ ಅಂತ ಕಾಣುತ್ತದೆ. ಕೇವಲ ಸಿಎಂ ಖುರ್ಚಿ ಮೇಲಿನ ಆಸೆಗಾಗಿ ಮಾತ್ರ ಬಿಎಸ್ವೈ ಸರ್ಕಸ್ ಮಾಡುತ್ತಾರೆ ಅಂತ ಕಾಣುತ್ತದೆ. ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ವಿರೋಧಿ ಪಕ್ಷವಲ್ಲ. ಆದರೆ, ಅದೇ (ಬಿಜೆಪಿ) ಪಕ್ಷದವರಿಗೆ ಅವರದ್ದೇ ಶಾಸಕರು ವಿರೋಧಿಗಳಾಗಿದ್ದಾರೆ ಎಂದರು.
ಕನಕಗಿರಿ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ಬೀಜ,ಗೊಬ್ಬರಗಳ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗಮನಿಸಬೇಕಿದ್ದ ಶಾಸಕರು ದೇವಸ್ಥಾನಗಳಲ್ಲಿ ಪೊಜೆ ಮಾಡುವ ಮೂಲಕ ಕಾಲ ಹರಣ ಮಾಡುತ್ತಿದ್ದಾರೆ.
ದೇವಸ್ಥಾನಕ್ಕೆ ಹೋಗಲು ಅವಕಾಶವಿಲ್ಲ. ಆದರೆ, ಹೋಮ ಮಾಡಿರುವ ಶಾಸಕರ ಮೇಲೆ ಜಿಲ್ಲಾಧಿಕಾರಿ ತಕ್ಷಣ ಕೇಸು ದಾಖಲಿಸಬೇಕು. ಇಲ್ಲವಾದಲ್ಲಿ ಅಫಿಡವಿಟ್ ಸಲ್ಲಿಸಿ ನ್ಯಾಯಾಲಯದ ಮೂಲಕ ಶಾಸಕರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತೇವೆ ಎಂದರು.
ಆಡಳಿತದಲ್ಲಿರುವವರು ಅಕ್ರಮಕ್ಕೆ ಕೈ ಹಾಕಿದ್ದಾರೆ- ಅಧಿಕಾರಿಗಳು ಶಾಮೀಲಾಗಿದ್ದಾರೆ
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಪಾಲನೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಗಳೇ ಮುಂದೆ ನಿಂತು ಇಸ್ಪೀಟ್, ಓಸಿ (ಮಟ್ಕಾ) ಆಡಿಸುವುದು ಹಾಗೂ ಅಕ್ರಮವಾಗಿ ಮರಳು ಸಾಗಿಸುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿರುವ ಬಿಜೆಪಿಗರು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಆದರೆ, ಕಾನೂನು ಮೀರಿ ಅಕ್ರಮಕ್ಕೆ ಕೈ ಹಾಕಿದ್ದಾರೆ. ಪರಿಣಾಮ ಇಡೀ ಕ್ಷೇತ್ರ ಅಕ್ರಮಗಳ ತವರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಶಿವರಾಜ ತಂಗಡಗಿ ಆಕ್ರೋಶ.. ಇನ್ನು, ಕಾನೂನು ಪಾಲನೆ ಮಾಡಬೇಕಿದ್ದ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಶಾಸಕ ಬಸವರಾಜ ದಢೇಸ್ಗೂರು ಪಾಲುದಾರರಾಗಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ ಎಂದು ತಂಗಡಗಿ ಹೇಳಿದರು. ಕನಕಗಿರಿ ಕ್ಷೇತ್ರದಲ್ಲಿ ಕಾನೂನು, ಸರ್ಕಾರ, ಪೊಲೀಸ್ ಎಂಬ ವ್ಯವಸ್ಥೆ ಇಲ್ಲದಂತಾಗಿದೆ.
ಎಲ್ಲಾ ಅಕ್ರಮಗಳಲ್ಲಿ ಅಧಿಕಾರಿಗಳು, ಶಾಸಕರು ಶಾಮೀಲಾಗಿದ್ದಾರೆ. ಅಕ್ರಮವಾಗಿ ಮರಳು ಸಾಗಿಸುವ ಸಂಬಂಧ, ಕಂದಾಯ, ಪೊಲೀಸ್ ಅಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಾರೆ. ಇಂತಹ ದುರಂತ ಕನಕಗಿರಿ ವಿಧಾನಸಭಾ ಕ್ಷೇತ್ರದ್ದು ಎಂದು ಮಾಜಿ ಸಚಿವ ತಂಗಡಗಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಡೆಂಗ್ಯೂ ಜ್ವರ: ಚಿಕಿತ್ಸೆ ಫಲಿಸದೆ ಸುಳ್ಯದ ಯುವಕ ಸಾವು
ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಹಶೀಲ್ದಾರ್ ಈ ಮಾಫಿಯಾದೊಂದಿಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಲಾಗುವುದು. ಕೋವಿಡ್ನಂತಹ ಸ್ಥಿತಿಯಲ್ಲಿ ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ, ಫೋಟೋ ಇದ್ದು ಅವರ ಅಮಾನತ್ಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.