ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟರೆ ಹುಷಾರ್​: ಶಿವರಾಜ ತಂಗಡಗಿ ಎಚ್ಚರಿಕೆ - ಮಾಜಿ ಸಚಿವ ಶಿವರಾಜ ತಂಗಡಗಿ ಗಂಗಾವತಿ ನ್ಯೂಸ್​

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಸಚಿವ ಈಶ್ವರಪ್ಪ ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಗಂಗಾವತಿ ಶಿವರಾಜ ತಂಗಡಗಿ ಸುದ್ದಿಗೋಷ್ಟಿ

By

Published : Nov 7, 2019, 6:19 PM IST

Updated : Nov 7, 2019, 7:27 PM IST

ಗಂಗಾವತಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಸಚಿವ ಈಶ್ವರಪ್ಪ ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಗಂಗಾವತಿ ಶಿವರಾಜ ತಂಗಡಗಿ ಸುದ್ದಿಗೋಷ್ಟಿ

ಕಾರಟಗಿಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹಾಗೂ ಸಚಿವ ಕೆ.ಎಸ್.​ ಈಶ್ವರಪ್ಪ ಅವರದ್ದು ಹರಕುಬಾಯಿ. ಈ ಇಬ್ಬರು ನಾಯಕರು ಬಾಯಿ ಚಟಕ್ಕೆ ಮಾತನಾಡುತ್ತಾರೆ. ಸಿದ್ದರಾಮಯ್ಯನವರಿಗೆ ಆಗಿರುವ ರಾಜಕೀಯ ಅನುಭವದಷ್ಟು ಇವರಿಗೆ ವಯಸ್ಸಾಗಿಲ್ಲ ಎಂದು ತಂಗಡಗಿ ಹರಿಹಾಯ್ದರು.

ಈಶ್ವರಪ್ಪ ಅವರ ಮೆದುಳಿಗೂ, ನಾಲಗೆಗೂ ಕನೆಕ್ಷನ್ ಇಲ್ಲ. ಈಶ್ವರಪ್ಪ ಮನೆಯಲ್ಲಿ ನೋಟ್ ಪ್ರಿಂಟ್ ಮಾಡುವ ಕಳ್ಳ. ಸಿದ್ದರಾಮಯ್ಯನವರ ಕಾಲಿನ ಧೂಳಿಗೂ ಸಮವಿಲ್ಲ. ಮಾಜಿ ಸಿಎಂ ಅವರು ಯಾವತ್ತೂ ಗತ್ತಿನ ರಾಜಕಾರಣಿ. ಗರತಿಯಂತಿದ್ದವರಿಗೆ ಅದು ಗೊತ್ತಾಗುತ್ತದೆ ಎಂದು ಶಿವರಾಜ ತಂಗಡಗಿ ಕಿಡಿಕಾರಿದರು.

Last Updated : Nov 7, 2019, 7:27 PM IST

ABOUT THE AUTHOR

...view details