ಕೊಪ್ಪಳ:ನೆರೆಮನೆಯ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಶಿಕ್ಷಕ ಕಾಮದಾಟವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಆತನಿಗೆ ಸಾಮಾನ್ಯ ಶಿಕ್ಷೆ ಆಗಬಾರದು. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ಇಂತಹ ಒಬ್ಬ ದುಷ್ಟ ಶಿಕ್ಷಕನಿದ್ದಾನೆ ಎನ್ನುವುದೇ ಖೇದಕರ ಸಂಗತಿಯಾಗಿದೆ. ಒಬ್ಬ ಶಿಕ್ಷಕನಾಗಿ ಆ ವ್ಯಕ್ತಿ ಅಂತಹ ಕೃತ್ಯದಲ್ಲಿ ತೊಡಗಿದ್ದು ಖಂಡನೀಯ. ಯಾರು ದೂರು ನೀಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವನನ್ನು ಬಂಧಿಸಬೇಕು. ಆತನಿಗೆ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.