ಕೊಪ್ಪಳ :ವಿಧಾನ ಪರಿಷತ್ ಚುನಾವಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗಲಿದ್ದಾರೆ. ಅದನ್ನು ಹೈಕಮಾಂಡ್ ಈಶ್ವರಪ್ಪ ಮೂಲಕ ಹರಿ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸಿಎಂ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.. ಮಾಜಿ ಸಚಿವ ಶಿವರಾಜ್ ತಂಗಡಗಿ ಕೊಪ್ಪಳದಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಒಮ್ಮೆ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ದೇನೆ. ಅವರಲ್ಲಿ ಒಡಲಕಿದೆ, ಒಗ್ಗಟ್ಟಿಲ್ಲ.
ಸಿಎಂ ಬದಲಾವಣೆ ನಿಶ್ಚಿತವಾಗಿದ್ದು, ಆಶ್ಚರ್ಯ ಪಡಬೇಕಾಗಿಲ್ಲ. ನನಗೆ ಸಿಎಂ ಬೊಮ್ಮಾಯಿ ಅವರ ಬಗ್ಗೆ ಅಭಿಮಾನವಿದೆ. ಆದರೆ, ಸಿಎಂ ಬದಲಾವಣೆ ಬಗ್ಗೆ ಬಿಜೆಪಿಗರು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಮುಖ ನೋಡಿದರೆ ಕುಡಿದವರಕ್ಕಿಂತ ಬಲ ಕಾಣುತ್ತಾರೆ. ಸಿದ್ದರಾಮಯ್ಯ ಅವರ ಬಗ್ಗೆ ಏನ್ ಹೇಳುತ್ತಾರೆ. ಈಶ್ವರಪ್ಪ ಅವರ ಮುಖ ನೋಡಿದರೆ ದೊಡ್ಡ ಕುಡುಕರು ಕಂಡಂತೆ ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಭಯೋತ್ಪಾದಕರನ್ನು ಹುಟ್ಟ ಹಾಕುವ ಪಕ್ಷ ಬಿಜೆಪಿಯೋ ಕಾಂಗ್ರೆಸ್ಸೋ ಎಂಬುದು ಗೊತ್ತಾಗಿದೆ. ಕಲ್ಬುರ್ಗಿ ಕೊಲೆ ಮಾಡಿದ್ದು ಯಾರು? ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ್ದು ಯಾರ ಫಾಲೋವರ್ ಎಂಬುದು ಗೊತ್ತಾಗಿದೆ? ಬಿಜೆಪಿಯವ್ರು ಭಯೋತ್ಪಾದಕರಷ್ಟೇ ಅಲ್ಲ, ಕೊಲೆಗಡುಕರು ಕೂಡ ಹೌದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ರಕ್ತದ ಕಣಕಣದಲ್ಲೂ ಮೋಸ ಇದೆ : ಸಚಿವ ಈಶ್ವರಪ್ಪ ವಾಗ್ದಾಳಿ