ಕೊಪ್ಪಳ:ವಿಶಾಲವಾದ ಆವರಣ , ಕಟ್ಟಡದ ಸುತ್ತ ಉದ್ಯಾನವನ. ಇದನ್ನ ನೋಡಿದರೆ ಯಾವುದೋ ದೊಡ್ಡ ಕಚೇರಿ ಎನಿಸುತ್ತದೆ. ಆದರೆ, ಅದು ಗ್ರಾಮ ಪಂಚಾಯ್ತಿ ಕಾರ್ಯಾಲಯ. ಗ್ರಾಮ ಪಂಚಾಯ್ತಿಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಮಾತಿಗೆ ಅಪವಾದ ಎಂಬಂತೆ ಈ ಗ್ರಾಮ ಪಂಚಾಯ್ತಿ ಸುವ್ಯವಸ್ಥಿತವಾಗಿದ್ದು, ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಗಾಂಧಿ ಗ್ರಾಮ ಪುರಸ್ಕಾರ ಪಡೆದ ಶಿರಗುಂಪಿ ಗ್ರಾಮ ಪಂಚಾಯ್ತಿ ಹೇಗಿದೆ ನೋಡಿ! - ಗ್ರಾಮ ಪಂಚಾಯ್ತಿ ಕಟ್ಟಡದ ಸುತ್ತ ಉದ್ಯಾನವನ
ವಿಶಾಲವಾದ ಆವರಣ , ಕಟ್ಟಡದ ಸುತ್ತ ಉದ್ಯಾನವನ. ಇದನ್ನ ನೋಡಿದರೆ ಯಾವುದೋ ದೊಡ್ಡ ಕಚೇರಿ ಎನಿಸುತ್ತದೆ. ಆದರೆ, ಅದು ಗ್ರಾಮ ಪಂಚಾಯ್ತಿ ಕಾರ್ಯಾಲಯ. ಗ್ರಾಮ ಪಂಚಾಯ್ತಿಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಮಾತಿಗೆ ಅಪವಾದ ಎಂಬಂತೆ ಈ ಗ್ರಾಮ ಪಂಚಾಯ್ತಿ ಸುವ್ಯವಸ್ಥಿತವಾಗಿದ್ದು, ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
![ಗಾಂಧಿ ಗ್ರಾಮ ಪುರಸ್ಕಾರ ಪಡೆದ ಶಿರಗುಂಪಿ ಗ್ರಾಮ ಪಂಚಾಯ್ತಿ ಹೇಗಿದೆ ನೋಡಿ!](https://etvbharatimages.akamaized.net/etvbharat/prod-images/768-512-4702119-thumbnail-3x2-surya.jpg)
ಜಾಲಿಹಾಳ, ರ್ಯಾವಣಕಿ, ಮೇಗೂರು, ಶಿರಗುಂಪಿ ಹಾಗೂ ಬಳೂಟಗಿ ಗ್ರಾಮಗಳನ್ನು ಒಳಗೊಂಡಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಿರಗುಂಪಿ ಗ್ರಾಮ ಪಂಚಾಯ್ತಿ ಒಂದು ಕ್ಷಣ ನೋಡುಗರ ಗಮನ ಸೆಳೆಯುತ್ತದೆ. ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ಈ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸುಸಜ್ಜಿತ ಕಟ್ಟಡ, ಉದ್ಯಾನವನ ಹೊಂದಿದೆ. ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಪಂಚಾಯ್ತಿಯ ಸದಸ್ಯರು ಹಾಗೂ ಸಿಬ್ಬಂದಿಯ ಶ್ರಮದಿಂದ ಪಂಚಾಯ್ತಿ ಇಂತಹ ಸುಂದರ ಪರಿಸರದ ರೂಪ ಪಡೆದುಕೊಂಡು ನಿಂತಿದೆ. ಅಲ್ಲದೆ, ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಇನ್ನು ಈ ಗ್ರಾಮ ಪಂಚಾಯ್ತಿಗೆ ಬರುವ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗ್ರಾಮ ಪಂಚಾಯ್ತಿಯಿಂದ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳು, ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಸಿಬ್ಬಂದಿಯ ಸ್ಪಂದನೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲಸ ಮಾಡುವ ಮನಸು ದೃಢವಾಗಿದ್ದರೆ ಇಂತಹ ಅಭಿವೃದ್ಧಿ ಕೆಲಸಗಳು ಆಗ್ತವೆ ಅನ್ನೋದಕ್ಕೆ ಶಿರಗುಂಪಿ ಗ್ರಾಮ ಪಂಚಾಯ್ತಿ ಉದಾಹರಣೆಯಾಗಿದ್ದು, ಇತರ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದೆ.