ಕುಷ್ಟಗಿ (ಕೊಪ್ಪಳ) :ತಾಲೂಕಿನ ಬಂಡ್ರಗಲ್ ಹೂಲಗೇರಾ ಮಧ್ಯೆ ಹರಿಯುವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮದ ಕುರಿಗಾಹಿ ಗಿರಿಯಪ್ಪ ಕಮತರ ಜೀವದ ಹಂಗು ತೊರೆದು ತನ್ನ ರಕ್ಷಿಸಿದ್ದಾರೆ. ಇವರ ಕಾರ್ಯಕ್ಕೆ ತಹಸೀಲ್ದಾರ್ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಾಣ ಪಣಕ್ಕಿಟ್ಟು ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಕುರಿಗಾಹಿ: ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ - Hevay rain in Kushtagi of Koppal
ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕುಷ್ಟಗಿಯ ಯುವಕನನ್ನು ರಕ್ಷಿಸಿದ ಬಂಡ್ರಗಲ್ನ ಕುರಿಗಾಹಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸೋಮವಾರ ತಡರಾತ್ರಿ ಕಾಟಾಪುರ - ಬಂಡ್ರಗಲ್ ಮದ್ಯೆ ಹರಿಯುವ ಹಿರೇ ಹಳ್ಳದಲ್ಲಿ ಗ್ರಾಮದ ಯುವಕ ಮಂಜುನಾಥ ಗೌಡರ್ ದುಸ್ಸಾಹಕ್ಕೆ ಇಳಿದು ಬೈಕ್ ಮೂಲಕ ಹಳ್ಳ ದಾಟಲು ಯತ್ನಿಸಿದ ಸಂದರ್ಭ ಬೈಕ್ ಸಮೇತ ಕೊಚ್ಚಿ ಹೋಗಿ ಗಿಡಗಂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಬಂಡ್ರಗಲ್ ಗ್ರಾಮದ ಗಿರಿಯಪ್ಪ ಮತ್ತು ಅಗ್ನಿಶಾಮಕ ದಳದ ಠಾಣಾಧಿಕಾರಿ ಎನ್. ರಾಜು ಪ್ರವಾಹದ ನಡುವೆ ಪ್ರಾಣ ಪಣಕ್ಕಿಟ್ಟು ಮಂಜುನಾಥನನ್ನ ರಕ್ಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಮತ್ತು ತಹಶೀಲ್ದಾರ್ ಎಂ.ಸಿದ್ದೇಶ್, ಗಿರಿಯಪ್ಪ ಕಮತರ ಅವರ ಮಾನವೀಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಅವರು ಪ್ರತ್ಯೇಕ ದಿನಾಂಕ ನಿಗದಿ ಮಾಡಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ಸಮ್ಮುಖದಲ್ಲಿ, ಗಿರಿಯಪ್ಪ ಕಮತರ ಸೇರಿದಂತೆ ಕಾರ್ಯಾಚರಣೆಯಲ್ಲಿ ಸಹಕರಿಸಿದ ಗ್ರಾಮಸ್ಥರನ್ನು ಸನ್ಮಾನಿಸುವುದಾಗಿ ತಿಳಿಸಿದರು. ತಹಶೀಲ್ದಾರ್ ಎಂ.ಸಿದ್ದೇಶ ಅವರು ಗಿರಿಯಪ್ಪ ಕಮತರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ. ಈ ವೇಳೆ, ಯುವಕನ ರಕ್ಷಣೆ ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಅಶೋಕ ಬೇವೂರು ಉಪಸ್ಥಿತರಿದ್ದರು.