ಕುಷ್ಟಗಿ(ಕೊಪ್ಪಳ): ನಾಡಿನಲ್ಲಿ ಶಾಂತಿ ನೆಲೆಗೊಳ್ಳಲು, ಜನರ ಭಾವನೆ ತಿಳಿಗೊಳ್ಳಲು, ಧರ್ಮ ಸಂಸ್ಕೃತಿ ಪುನರುತ್ಥಾನಗೊಳಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗರು ಮಹಾಪೀಠದಲ್ಲಿ ಶತರುದ್ರಯಾಗ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಬಾಳೆಹೊನ್ನೂರು ಮಹಾಪೀಠದ ಪರಿಸರದಲ್ಲಿ ಶತರುದ್ರಯಾಗ: ರಂಭಾಪುರಿ ಶ್ರೀ - ಬಾಳೆ ಹೊನ್ನೂರು ಮಹಾಪೀಠ
ಬಾಳೆಹೊನ್ನೂರು ಮಹಾಪೀಠದ ಪರಿಸರದಲ್ಲಿ ಫೆ. 10-15ರವರೆಗೆ ಐದು ದಿನಗಳ ಕಾಲ ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣದ 30ನೇ ವರ್ಷದ ಆರಂಭೋತ್ಸವ ಹಾಗೂ 65ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಇಂದು ಕುಷ್ಟಗಿಯಲ್ಲಿ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಅವರ ನಿವಾಸದಲ್ಲಿ ಲಿಂಗ ಪೂಜೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಾಳೆಹೊನ್ನೂರು ಮಹಾಪೀಠದ ಪರಿಸರದಲ್ಲಿ ಫೆ. 10-15ರವರೆಗೆ ಐದು ದಿನಗಳ ಕಾಲ ಶ್ರೀ ರಂಭಾಪುರಿ ಜಗದ್ಗುರುಗಳ ಪೀಠಾರೋಹಣದ 30ನೇ ವರ್ಷದ ಆರಂಭೋತ್ಸವ ಹಾಗೂ 65ನೇ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ರಂಭಾಪುರಿ ಪೀಠರೋಹಣವಾಗಿ 29 ವರ್ಷ ಪೂರ್ಣಗೊಂಡು, 30ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಹಾಗೂ 64 ವರ್ಷ ತುಂಬಿ 65 ವಸಂತ ಪೂರೈಸಿದ ಈ ಸಂದರ್ಭದಲ್ಲಿ 5 ದಿನಗಳ ಕಾಲ ರಂಭಾಪುರಿ ಮೂಲ ಪೀಠದಲ್ಲಿ ಶತರುದ್ರಯಾಗ ನಡೆಸಲು ಸಂಕಲ್ಪಿಸಿರುವುದಾಗಿ ತಿಳಿಸಿದರು.