ಗಂಗಾವತಿ:ಈ ಬಾರಿ ಹನುಮ ಮಾಲೆ ವಿಸರ್ಜನೆಗೆ ರಾಜ್ಯದ ನಾನಾ ಭಾಗದಿಂದ ಅಂಜನಾದ್ರಿಗೆ ಸುಮಾರು ಎರಡು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಇಲಾಖೆಯಿಂದ ಸಿದ್ಧತೆ ನಡೆಸಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಗೆ ಬುಧವಾರ ಜಿಲ್ಲಾಡಳಿತದ ನಾನಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲಿಸಿದ ಸಚಿವರು, ಬಳಿಕ ಕೈಗೊಂಡ ಸಿದ್ಧತೆಯ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಈ ವರ್ಷ ಡಿಸಂಬರ್ 3,4 ಮತ್ತು 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿಗೆ ಬರುವ ನಿರೀಕ್ಷೆಯಿದೆ. ಬೇರೆ ರಾಜ್ಯದಿಂದ ಹನುಮ ಮಾಲಾಧಾರಿಗಳು ಬರಲಿದ್ದಾರೆ. ಹೀಗಾಗಿ ಜಿಲ್ಲಾಡಳಿತದಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುತ್ತಿದೆ.