ಗಂಗಾವತಿ:ರಾಮಾಯಣ ಕಾಲದ ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಭಾನುವಾರ ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಭೇಟಿ ನೀಡಿ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸರ್ಕಾರದ ಶ್ರೀ ರಾಮ ಸರ್ಕ್ಯೂಟ್ ಅಧ್ಯಕ್ಷ ಶರ್ಮ ಭೇಟಿ - Anjanadri hill news
ಅಂಜನಾದ್ರಿ ಬೆಟ್ಟವನ್ನು ಕೇಂದ್ರ ಸರ್ಕಾರದ ರಾಮ ಸರ್ಕ್ಯೂಟ್ ಯೋಜನೆಯಲ್ಲಿ ಸೇರಿಸಬೇಕು ಎಂಬ ಉದ್ದೇಶ ಹೊಂದಿದ್ದು, ಇದಕ್ಕಾಗಿ ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ತಂಡ ಬಂದಿದೆ ಎನ್ನಲಾಗಿದೆ.

ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸರ್ಕಾರದ ರಾಮ ಸರ್ಕ್ಯೂಟ್ ಅಧ್ಯಕ್ಷ ಶರ್ಮ ಭೇಟಿ
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಶ್ರೀ ರಾಮ ಸರ್ಕ್ಯೂಟ್ ಅಧ್ಯಕ್ಷ ಡಾ. ರಾಮಾವತಾರ ಶರ್ಮ, ವಿಶ್ವಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಅಲೋಕ್ ಕುಮಾರ್ ಮೊದಲಾದವರ ತಂಡ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅಂಜನಾದ್ರಿ ಬೆಟ್ಟವನ್ನು ಕೇಂದ್ರ ಸರ್ಕಾರದ ರಾಮ ಸರ್ಕ್ಯೂಟ್ ಯೋಜನೆಯಲ್ಲಿ ಸೇರಿಸಬೇಕು ಎಂಬ ಉದ್ದೇಶ ಹೊಂದಿದ್ದು, ಇದಕ್ಕಾಗಿ ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ತಂಡ ಬಂದಿದೆ ಎನ್ನಲಾಗಿದೆ. ಶಾಸಕ ಪರಣ್ಣ ಮುನವಳ್ಳಿ, ತಾಲ್ಲೂಕು ಪಂಚಾಯತ್ ಇಒ ಡಾ.ಡಿ. ಮೋಹನ್ ಅತಿಥಿಗಳನ್ನು ಸನ್ಮಾನಿಸಿದರು.