ಕುಷ್ಟಗಿ(ಕೊಪ್ಪಳ) :ಕುಷ್ಟಗಿಯಲ್ಲಿ ಸಂವಿಧಾನ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ವಿರುದ್ಧ ಟೀಕೆ ಮಾಡಿದರು. ಇದರಿಂದ ವೇದಿಕೆಯಲ್ಲೇ ಕುಳಿತ್ತಿದ್ದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶರಣು ತಳ್ಳಿಕೇರಿ ಸಿಟ್ಟಿಗೆದ್ದರು. ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ಹೊರ ನಡೆದರು.
ಮೋದಿ ವಿರುದ್ಧಸಿದ್ದರಾಮಯ್ಯ ಮಾತಿಗೆ ಆಕ್ಷೇಪ: ವೇದಿಕೆಯಿಂದ ಹೊರ ನಡೆದ ಶರಣು ತಳ್ಳಿಕೇರಿ ಕುಷ್ಟಗಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪ್ರಧಾನ ಭಾಷಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ, ಅದರ ದ್ಯೇಯೋದ್ದೇಶಗಳಿಗೆ ವಿರುದ್ದವಾಗಿ ಕೇಂದ್ರ ಸಚಿವರಾಗಿದ್ದ ಆನಂತಕುಮಾರ ಹೆಗಡೆ ಮಾತನಾಡಿದಾಗ, ದೇಶದ ಪ್ರಧಾನಿ ಆಗಿದ್ದ ನರೇಂದ್ರ ಮೋದಿ ಅವರು ಡಿಸ್ಮಿಸ್ ಮಾಡಿದ್ರಾ?, ಪಕ್ಷದಿಂದ ತೆಗೆದು ಹಾಕಿದ್ರಾ? ಎಂದು ಪ್ರಶ್ನಿಸಿದರು.
ಇದು ಮೋದಿ ಅವರ ಕುಮ್ಮಕ್ಕಿನಿಂದಲೇ ಅಲ್ವಾ? ಎಂದಾಗ ವೇದಿಕೆಯಲ್ಲಿದ್ದ ಶರಣು ತಳ್ಳಿಕೇರಿ ಕೂಡಲೇ ಸಿದ್ದರಾಮಯ್ಯ ಅವರಿಗೆ ಆ ಮಾತು ವಾಪಸ್ ತೆಗೆದುಕೊಳ್ಳಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರಯ್ಯ ಅವನು?, ನಾನು ವಾಪಸ್ ಪಡೆಯಲ್ಲ. ಕೇಳಿಸಿಕೊಳ್ಳಲು ಇಷ್ಟ ಇಲ್ಲ ಅಂದರೆ ವಾಪಸ್ ಹೋಗಬಹುದು ಎಂದರು. ಆಗ ಶರಣು ತಳ್ಳಿಕೇರಿ ವೇದಿಕೆಯಿಂದ ನಿರ್ಗಮಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರಣು ತಳ್ಳಿಕೇರಿ, ಸಂವಿಧಾನ ಸಂರಕ್ಷಣಾ ಸಮಾವೇಶ ಜಾತ್ಯಾತೀತ, ಪಕ್ಷಾತೀತವಾದ ನನ್ನೂರಿನ ಕಾರ್ಯಕ್ರಮ. ನಾನು ಅವರಂತೆಯೇ ಅತಿಥಿ. ಅವರು ಸಂವಿಧಾನದ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಮೋದಿ ವಿರುದ್ದ ಆಧಾರ ಇಲ್ಲದೇ ಟೀಕಿಸಿದ್ದಕ್ಕೆ ಸಿದ್ದರಾಮಯ್ಯ ವಿರುದ್ದ ಆಕ್ಷೇಪಿಸಿದ್ದೇನೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಲಿ ಅಲ್ಲಿ ಪ್ರತಿಸ್ಪರ್ಧೆ ಇದ್ದೇ ಇರುತ್ತದೆ ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ.. ಆಗ ತಳ್ಳಾಟ ನೂಕಾಟ ಹೆಚ್ಚಾದಾಗ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಮಧ್ಯಪ್ರವೇಶಿದಾಗ, ಇದು ನನ್ನೂರಿನ ಕಾರ್ಯಕ್ರಮ ಸಿದ್ದರಾಮಯ್ಯ ಅತಿಥಿಯಾಗಿ ಬಂದವರು. ಮೋದಿ ವಿರುದ್ದ ಟೀಕೆಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಆಗ ಶರಣು ತಳ್ಳಿಕೇರಿ ಅವರನ್ನು ಪೊಲೀಸರ ರಕ್ಷಣೆಯಲ್ಲಿ ಕರೆದೊಯ್ಯಲಾಯಿತು.