ಕೊಪ್ಪಳ:ಇಂದಿನ ಪಾರ್ಲಿಮೆಂಟ್ 12ನೇ ಶತಮಾನದ ಅನುಭವ ಮಂಟಪದಿಂದ ಪಡೆದ ವ್ಯವಸ್ಥೆ ಅಂತಾ ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿಂದು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನ ಜತೆಗೂಡಿ ಜಾತಿವ್ಯವಸ್ಥೆಯ ಬಗ್ಗೆ, ಮೌಢ್ಯತೆಯ ಬಗ್ಗೆ ಅರಿವು ಮೂಡಿಸಿದ್ದಾರೆಂದರು.
ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ.. ಅನುಭವ ಮಂಟಪದ ಮೂಲಕ ಅಂಬಿಗರ ಚೌಡಯ್ಯರಾದಿಯಾಗಿ ಶರಣರು ಚಿಂತನ-ಮಂಥನ ನಡೆಸುತ್ತಿದ್ದರು. ಇಂದಿನ ಪಾರ್ಲಿಮೆಂಟ್ ಅಂದಿನ ಅನುಭವ ಮಂಟಪದಿಂದ ಪಡೆದ ವ್ಯವಸ್ಥೆಯಾಗಿದೆ. ಶರಣರ, ಮಹಾತ್ಮರ ಜಯಂತಿಯನ್ನು ಮಾಡಿದರಷ್ಟೇ ಸಾಲದು, ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.ಶಿಕ್ಷಣ ಮತ್ತು ಸಂಘಟನೆ ಬಹುಮುಖ್ಯ. ಇದನ್ನೇ ಡಾ. ಅಂಬೇಡ್ಕರ್ ಅವರೂ ಸಹ ಹೇಳಿದ್ದಾರೆ. ಶಿಕ್ಷಣ ಮತ್ತು ಸಂಘಟನೆಯಿಂದ ಸರ್ಕಾರದ ಸೌಲಭ್ಯ ಪಡೆಯಬಹುದು ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಕಬ್ಬೇರ್, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಬಾಳಪ್ಪ ಬಾರಕೇರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಸೇರಿ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.