ಗಂಗಾವತಿ: ಶಿಕ್ಷಕರ ದಿನಾಚರಣೆಯ ದಿನ ಕರಾಳ ದಿನಾಚರಣೆ ಆಚರಿಸಿ ಮಾಜಿ ರಾಷ್ಟ್ರಪತಿಗೆ ಕ್ಯಾಮ್ಸ್ ಸಂಘಟನೆ ಅಪಮಾನ ಮಾಡಿದೆ ಎಂದು ಎಸ್ಎಫ್ಐ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾಮ್ಸ್ ಸಂಘಟನೆಯ ಕರಾಳ ದಿನಾಚರಣೆಗೆ ಎಸ್ಎಫ್ಐ ತೀವ್ರ ಖಂಡನೆ - CAMS organization insults Former President
ಇಡೀ ದೇಶ ಕಂಡ ಒಬ್ಬ ಶ್ರೇಷ್ಠ ತತ್ವಜ್ಞಾನಿ ಮತ್ತು ಶಿಕ್ಷಕರ ಏಳ್ಗೆಗೆ ಜೀವನ ಮುಡಿಪಿಟ್ಟ ಒಬ್ಬ ಮೇಧಾವಿಗೆ ಕ್ಯಾಮ್ಸ್ ಸಂಘಟನೆ ಅಪಮಾನ ಮಾಡಿದೆ. ಇದು ಕ್ಷಮಕ್ಕೆ ಅರ್ಹವಲ್ಲದ ಸಂಗತಿ ಎಂದು ಕ್ಯಾಮ್ಸ್ ಸಂಘಟನೆ ಗಂಗಾವತಿಯಲ್ಲಿ ಎಸ್ಎಫ್ಐ ಅಸಮಾಧಾನ ವ್ಯಕ್ತಪಡಿಸಿದೆ.

ಕ್ಯಾಮ್ಸ್ ಸಂಘಟನೆಯ ಕರಾಳ ದಿನಾಚರಣೆಗೆ ಎಸ್ಎಫ್ಐ ತೀವ್ರ ಖಂಡನೆ
ಕ್ಯಾಮ್ಸ್ ಸಂಘಟನೆಯ ಕರಾಳ ದಿನಾಚರಣೆಗೆ ಎಸ್ಎಫ್ಐ ತೀವ್ರ ಖಂಡನೆ
ಈ ಬಗ್ಗೆ ಮಾತನಾಡಿರುವ ಎಸ್ಎಫ್ಐ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ ಕ್ಯಾಮ್ಸ್ ಸಂಘಟನೆಗೆ ಅಸಮಾಧಾನವಿದ್ದರೆ ಕಪ್ಪುಪಟ್ಟಿ ಧರಿಸಿಕೊಂಡು ಶಿಕ್ಷಕರ ದಿನಾವಚರಣೆ ಮಾಡಬಹುದಿತ್ತು. ಆದರೆ ಕರಾಳ ದಿನ ಆಚರಿಸಿ ಮಾಜಿ ರಾಷ್ಟ್ರಪತಿಗೆ ಅಪಮಾನ ಮಾಡಿದ್ದಾರೆ.
ಅಲ್ಲದೇ ಶಿಕ್ಷಣ ಇಲಾಖೆಯ ಮೇಲಿನ ಅಸಮಾಧಾನಕ್ಕೆ ಇಡೀ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದ ಕ್ಯಾಮ್ಸ್ ಸಂಘಟನೆಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.