ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಲೈಂಗಿಕ ಶೋಷಣೆ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬಾಲಕಿಯನ್ನು ಒತ್ತಾಯ ಪೂರ್ವಕವಾಗಿ ಲೈಂಗಿಕ ಶೋಷಣೆಗೆ ಒಳಪಡಿಸಿದ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಯುವಕ ಒತ್ತಾಯ ಪೂರ್ವಕವಾಗಿ ಸಂತ್ರಸ್ತೆ ಮೇಲೆ ಲೈಂಗಿನ ಶೋಷಣೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

Sexual exploitation
ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

By

Published : Sep 13, 2022, 3:50 PM IST

ಗಂಗಾವತಿ (ಕೊಪ್ಪಳ):ಅಪ್ರಾಪ್ತೆಯನ್ನು ಒತ್ತಾಯ ಪೂರ್ವಕವಾಗಿ ಲೈಂಗಿಕ ಶೋಷಣೆಗೆ ಒಳಪಡಿಸಿದ್ದಲ್ಲದೇ, ಎರಡು ದಿನ ತನ್ನ ವಶದಲ್ಲಿರಿಸಿಕೊಂಡ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಪೊಲೀಸರು ಬಂಧಿಸಿದ್ದು, ನಗರದ ಎಚ್ಆರ್​ಎಸ್​ ​ಕಾಲೋನಿಯ ಹುಲ್ಲೇಶ ಮಹಾದೇವ ಕೊಜ್ಜ ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿ ಪರವಾಗಿ ಹೊಸಳ್ಳಿ ಗ್ರಾಮದ ಮಹಿಳೆ ದೂರು ನೀಡಿದ್ದಾರೆ.

ಸಂತ್ರಸ್ತ ಬಾಲಕಿಯು ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಶಾಲೆಯೊಂದರಲ್ಲಿ ಓದುತ್ತಿದ್ದಳು. ಕಳೆದ ಹಲವು ದಿನಗಳಿಂದ ಆರೋಪಿ ಯುವಕ ಆಕೆಯನ್ನು ಹಿಂಬಾಲಿಸುತ್ತಿದ್ದ. ಎಂದಿನಂತೆ ಬಾಲಕಿ ಸೆ.7 ರಂದು ಶಾಲೆಗೆ ಹೋಗಿದ್ದಾಳೆ. ಶಾಲೆಯಿಂದ ಮರಳಿ ಬಾರದ ಹಿನ್ನೆಲೆ ಪಾಲಕರು ಆಕೆಯನ್ನು ಹುಡುಕಾಡಿದ್ದಾರೆ. ಆದರೆ ಬಾಲಕಿ ಸಿಕ್ಕಿಲ್ಲ. ಬಳಿಕ ಸೆ.9 ರಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆ ಪತ್ತೆಯಾಗಿದ್ದಳು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ಶೋಷಣೆ.. ಪೋಕ್ಸೋ ಅಡಿ ವ್ಯಕ್ತಿ ಪೊಲೀಸರ ವಶಕ್ಕೆ

ಈ ಬಗ್ಗೆ ವಿಚಾರಿಸಿದಾಗ ಆರೋಪಿ ಯುವಕ ಒತ್ತಾಯ ಪೂರ್ವಕವಾಗಿ ಆಕೆಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಗಂಗಾವತಿ ಸಮೀಪದ ವಾಣಿ ವೀರಭದ್ರೇಶ್ವರ ದೇವಸ್ಥಾನದ ಗುಡ್ಡದ ಅಜ್ಞಾತ ಸ್ಥಳದಲ್ಲಿ ಎರಡು ದಿನ ಇಟ್ಟು ನಿರಂತರ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ಬಾಲಕಿ, ಪಾಲಕರಿಗೆ ಹೇಳಿದ್ದಾಳೆ ಎನ್ನಲಾಗ್ತಿದೆ. ಬಾಲಕಿ ಹೇಳಿಕೆ ಆಧಾರಿಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details