ಕರ್ನಾಟಕ

karnataka

ETV Bharat / state

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ - ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ವಿದೇಶಿಗರಿಗೆ ದಂಡ

ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದ ನ್ಯೂಜಿಲೆಂಡಿನ ನಾಗರಿಕರಿಗೆ ಗಂಗಾವತಿ ಪೊಲೀಸರು ಏಳು ಸಾವಿರ ದಂಡ ವಿಧಿಸಿದ್ದಾರೆ.

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ

By

Published : Oct 14, 2019, 11:55 PM IST

ಗಂಗಾವತಿ:ವಾಹನ ಚಲಾವಣೆಯ ಸಂದರ್ಭದಲ್ಲಿ ಸೂಕ್ತ ದಾಖಲೆ ತೋರಿಸುವಂತೆ ಕೋರಿದ್ದಕ್ಕೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ವಿದೇಶಿಗರಿಗೆ ತಲಾ ಮೂರುವರೆ ಸಾವಿರ ದಂಡ ವಿಧಿಸಿದ್ದಾರೆ.

ದುಂಡಾವರ್ತನೆ ತೋರಿದ ವಿದೇಶಿಗರಿಗೆ ಬಿತ್ತು ಏಳು ಸಾವಿರ ದಂಡ

ವಿರುಪಾಪುರ ಗಡ್ಡೆಯಿಂದ ನಗರಕ್ಕೆ ಒಂದೇ ಬೈಕ್​​ನಲ್ಲಿ ಇಬ್ಬರು ಯುವತಿಯರು, ಓರ್ವ ಯುವಕ ಸೇರಿದಂತೆ ಮೂರು ಜನ ವಿದೇಶಿಗರು ಬಂದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರೊಂದಿಗೆ ವಿದೇಶಿಗರು ಅನುಚಿತವಾಗಿ ವರ್ತಿಸಿದ್ದರು. ಮೊದಲಿಗೆ ತಮ್ಮದು ಆಸ್ಟ್ರೇಲಿಯಾ ಎಂದು ವಿದೇಶಿಗರು ತಿಳಿಸಿದ್ದರು. ಆ ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಇವರು ನ್ಯೂಜಿಲೆಂಡಿನ ನಾಗರಿಕರಾದ ಡೇವಿಡ್, ಚಾಲರ್ ಮತ್ತು ಇಡನ್ಲಿ ಎಂದು ಗೊತ್ತಾಗಿದೆ.

ಪೊಲೀಸರು ಡ್ರೈವಿಂಗ್ ಲೈಸನ್ಸ್, ಇನ್ಸುರೆನ್ಸ್, ಹೆಲ್ಮೆಟ್ ಇಲ್ಲದಿದ್ದಕ್ಕೆ ಮತ್ತು ದುರ್ವರ್ತನೆ ತೋರಿದ್ದಕ್ಕೆ ಇಬ್ಬರ ಮೇಲೆ ತಲಾ 3,500 ಸಾವಿರ ದಂಡ ವಿಧಿಸಿದ್ದಾರೆ.

For All Latest Updates

ABOUT THE AUTHOR

...view details