ಕರ್ನಾಟಕ

karnataka

ETV Bharat / state

ಅನಧಿಕೃತ ರೆಸಾರ್ಟ್ ತೆರವು ಕಾರ್ಯಾಚರಣೆ: ವಿದೇಶಿ ಪ್ರವಾಸಿಗರ ತಾಣದಲ್ಲಿ ಸೆಕ್ಷನ್​ 144 ಜಾರಿ - ವಿದೇಶಿ ಪ್ರವಾಸಿಗರ ತಾಣದಲ್ಲಿ ಸೆಕ್ಷನ್​ 144 ಜಾರಿ

ಅನಧಿಕೃತ ರೆಸಾರ್ಟ್​ಗಳ ತೆರವು ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ‌ ನಡೆಯದಂತೆ ತಡೆಯಲು ವಿದೇಶಿ ಪ್ರವಾಸಿಗರ ತಾಣದಲ್ಲಿ ಕಲಂ 144 ಜಾರಿ ಮಾಡಿ, ನಿಷೇಧಾಜ್ಞೆ ಹೊರಡಿಸಲಾಗಿದೆ.

Section 144 enforcement at foreign tourist site
ವಿದೇಶಿ ಪ್ರವಾಸಿಗರ ತಾಣದಲ್ಲಿ ಸೆಕ್ಷನ್​ 144 ಜಾರಿ

By

Published : Mar 3, 2020, 3:41 AM IST

ಗಂಗಾವತಿ: ಅನಧಿಕೃತ ರೆಸಾರ್ಟ್​ಗಳ ತೆರವು ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ‌ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲು ವಿದೇಶಿ ಪ್ರವಾಸಿಗರ ತಾಣದಲ್ಲಿ ಕಲಂ 144 ಜಾರಿ ಮಾಡಿ, ನಿಷೇಧಾಜ್ಞೆ ಹೊರಡಿಸಲಾಗಿದೆ.

ಕಾಲಂ 144 ಜಾರಿ ಆದೇಶ

ತಹಶೀಲ್ದಾರ್ ಚಂದ್ರಕಾಂತ್ ಆದೇಶ ಹೊರಡಿಸಿದ್ದು, ಇಂದು ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ 10 ಗಂಟೆವರೆಗೂ ವಿರುಪಾಪುರ ಗಡ್ಡಿ ಹಾಗೂ ಸುತ್ತಲೂ ಎರಡು ಕಿ.ಮೀ ಸಾರ್ವಜನಿಕ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ತೆರವು ಕಾರ್ಯಚರಣೆ‌ ನಡೆಸುವ ಸಂದರ್ಭದಲ್ಲಿ ಕೆಲವರು ಉದ್ದೇಶ ಪೂರ್ವಕವಾಗಿ ತಡೆಗಟ್ಟಲು ಯತ್ನಿಸಿದ ಘಟನೆ ನಡೆದಿತ್ತು. ಮತ್ತು ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದ ಹಿನ್ನೆಲೆ ಅದೇ ಮಾದರಿಯ ಯತ್ನಗಳು ಮತ್ತೆ ನಡೆಯುತ್ತವೆ ಎಂಬ ಮಾಹಿತಿ ಮೇರೆಗೆ ತಹಶೀಲ್ದಾರ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

ವಿದೇಶಿ ಪ್ರವಾಸಿಗರ ತಾಣದಲ್ಲಿ ಸೆಕ್ಷನ್​ 144 ಜಾರಿ

ABOUT THE AUTHOR

...view details