ಗಂಗಾವತಿ: ನೀರಾವರಿ ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತದ ಬೆಳೆಗೆ ಕಣಿ ಹುಳುವಿನ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಭತ್ತದ ಬೆಳೆಗೆ ಕಣಿ ಹುಳುವಿನ ಬಾಧೆ: ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ವಿಜ್ಞಾನಿಗಳ ತಂಡ ಭೇಟಿ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ ತಂಡದಲ್ಲಿನ ವಿಜ್ಞಾನಿಗಳು ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ವಿದ್ಯಾನಗರ, ಮರಳಿ ಮತ್ತಿತರ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆ ನಾಟಿ ಮಾಡಲಾಗಿದ್ದ ಬೆಳೆಗೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ 2ನೇ ಬೆಳೆಗೂ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಾಧೆಯಿಂದ ಭತ್ತದ ಪೈರಿನಲ್ಲಿ ಕೊಳವೆ ಆಕಾರದ ಹುಲ್ಲು ಬೆಳೆಯುತ್ತದೆ. ತೆನೆ ಕಟ್ಟದಿರುವುದರಿಂದ ಇಳುವರಿ ಕಡಿಮೆಯಾಗಿದೆ. ಕೇವಲ 20 ದಿನದ ಭತ್ತದ ನಾಟಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ರೈತರು ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಹವಾಮಾನ ಸಮಸ್ಯೆಯೋ, ಬೀಜ, ನೀರು, ಗೊಬ್ಬರದ ಸಮಸ್ಯೆಯೋ ಎಂಬುವುದರ ಬಗ್ಗೆ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಿ ಪರಿಶೀಲಿಸಲಾಗುವುದು ಎಂದು ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳು ತಿಳಿಸಿದ್ದಾರೆ.