ಕರ್ನಾಟಕ

karnataka

ETV Bharat / state

ಶಿಕ್ಷಕರ ಸಂಘದ ಕಾರು ಕಳ್ಳತನ: ದೂರು ದಾಖಲು - ಕಾರು ನಾಪತ್ತೆ

ಶಾಲಾ ಶಿಕ್ಷಕರ ಸಂಘದ ಹೆಸರಿನಲ್ಲಿದ್ದ ಕಾರು ಕಳ್ಳತನವಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಶಿಕ್ಷಕರ ಸಂಘದ ಕಾರು ಕಳ್ಳತನ
ಶಿಕ್ಷಕರ ಸಂಘದ ಕಾರು ಕಳ್ಳತನ

By ETV Bharat Karnataka Team

Published : Nov 21, 2023, 5:00 PM IST

Updated : Nov 21, 2023, 10:47 PM IST

ಶಿಕ್ಷಕರ ಸಂಘದ ಕಾರು ಕಳ್ಳತನ

ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರ ಹೆಸರಿನಲ್ಲಿದ್ದ ಕಾರು ಭಾನುವಾರ ರಾತ್ರಿ ಕಳ್ಳತನವಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕೊಪ್ಪಳ ಮೀಡಿಯಾ ಕ್ಲಬ್​ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

''ನನಗೆ ಸಂಘದಿಂದ ನೀಡಲಾಗಿದ್ದ ಕಾರು ನಾಪತ್ತೆಯಾಗಿದೆ. ಕಾರಿನ ಒಂದು ಕೀಲಿ‌ ನನ್ನ ಬಳಿ, ಇನ್ನೊಂದು ಕೀಲಿ ಕಚೇರಿಯಲ್ಲಿತ್ತು. ಸೋಮವಾರ ಬೆಳಗ್ಗೆ ನೋಡಿದಾಗ ನನ್ನ ಮನೆ ಬಳಿ ಕಾರು ಇರಲಿಲ್ಲ. ಕಾರು ಯಾರು ಕದ್ದುಕೊಂಡು ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಕಾರು ಬೆಂಗಳೂರಿನಲ್ಲಿರುವ ಸಂಘದ ಕಚೇರಿ ಬಳಿಯಿದೆ ಎನ್ನುವ ಮಾಹಿತಿ ಇದೆ‌. ಕೆ.ಎ.50, ಎಂಬಿ 0382 ಸಂಖ್ಯೆಯ ಕಾರು ಕಳ್ಳತನವಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿರುವೆ'' ಎಂದು ಹೇಳಿದರು.

ಕೆಲ ತಿಂಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಾರು ಎನ್ನುವುದು ಗೊಂದಲವಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಇದರ ನಡುವೆಯೇ ಸಂಘಕ್ಕೆ ತಾವೇ ಅಧ್ಯಕ್ಷರೆಂದು ಮಂಡ್ಯದ ನಾಗೇಶ ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಜಿಲ್ಲಾಧ್ಯಕ್ಷರ ಸಭೆ ನಡೆಸಿದ್ದರು. ವಿಚಾರಣೆಯ ಹಂತದಲ್ಲಿಯೇ ಶಿಕ್ಷಕರ ಸಂಘದಲ್ಲಿ ಗೊಂದಲ ಉಂಟಾಗಿತ್ತು.

ಸದ್ಯ ಸಂಘದಲ್ಲಿನ ಕೆಲವು ಘಟನೆಗಳನ್ನು ನೋಡಿ ನನಗೆ ಜೀವ ಭಯ ಉಂಟಾಗಿದೆ. ನಾನು 2020ರಲ್ಲೇ ಐದು ವರ್ಷಕ್ಕೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಆದರೆ, ಕಳೆದ ಮೇ ತಿಂಗಳಲ್ಲಿ ಶಂಬುಲಿಂಗನಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೇವೆ. ಆ ಸ್ಥಾನಕ್ಕೆ ನಾಗೇಶ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದಾಗಿ ಕೆಲವರು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಶಂಭುಲಿಂಗನಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇದರ ನಡುವೆಯೇ ಈ ಘಟನೆ ನಡೆದಿರುವುದಕ್ಕೆ ಮತ್ತಷ್ಟು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೊಪ್ಪಳ: ಒಂಟಿ ಮಹಿಳೆ ರಕ್ಷಣೆ, ಸಾಂತ್ವನ ಕೇಂದ್ರದಲ್ಲಿ ಆಶ್ರಯ

Last Updated : Nov 21, 2023, 10:47 PM IST

ABOUT THE AUTHOR

...view details