ಕರ್ನಾಟಕ

karnataka

ETV Bharat / state

1 ರಿಂದ 5ನೇ ತರಗತಿ ಪುನಾರಂಭ: ಮಕ್ಕಳಿಗೆ ಹೂವು ಹಾಕಿ ಸ್ವಾಗತಿಸಿದ ಶಿಕ್ಷಕರು - ಮಕ್ಕಳಿಗೆ ಹೂವು ಹಾಕಿ ಸ್ವಾಗತಿಸಿದ ಶಿಕ್ಷಕರು

ನಗರದ ಗಡಿಯಾರ ಕಂಬ ಸರ್ಕಲ್ ಬಳಿ ಇರುವ ಸಿಪಿಎಸ್ ಶಾಲೆಯಲ್ಲಿ ಮಕ್ಕಳ ಸ್ವಾಗತಕ್ಕಾಗಿ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.

school reopening
ಮಕ್ಕಳಿಗೆ ಹೂವು ಹಾಕಿ ಸ್ವಾಗತಿಸಿದ ಶಿಕ್ಷಕರು

By

Published : Oct 25, 2021, 2:32 PM IST

ಕೊಪ್ಪಳ: ಇಂದಿನಿಂದ 1 ರಿಂದ 5 ನೇ ತರಗತಿ ಪ್ರಾರಂಭ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಮಕ್ಕಳನ್ನು ಶಿಕ್ಷಕರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ತರಗತಿ ಪುನಾರಂಭ: ಮಕ್ಕಳಿಗೆ ಹೂವು ಹಾಕಿ ಸ್ವಾಗತಿಸಿದ ಶಿಕ್ಷಕರು

ಜಿಲ್ಲೆಯ ವಿವಿಧ ಶಾಲೆಗಳನ್ನು ತಳಿರು ತೋರಣ, ಬಲೂನ್​​ಗಳಿಂದ ಸಿಂಗರಿಸಿ, ರಂಗೋಲಿ ಹಾಕಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕ ಸಿಬ್ಬಂದಿ ಅತ್ಯಂತ ಸಂಭ್ರಮದಿಂದ ಬೆಳಗ್ಗೆಯಿಂದಲೇ ಸಜ್ಜಾಗಿ ನಿಂತಿದ್ದು, ಮಕ್ಕಳಿಗೆ ಪುಷ್ಪವೃಷ್ಠಿ ಮಾಡಿ ಬರಮಾಡಿಕೊಂಡರು. ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಅತ್ಯಂತ ಖುಷಿಯಿಂದಲೇ ಕರೆದುಕೊಂಡು ಬಂದ ದೃಶ್ಯ ಸಾಮಾನ್ಯವಾಗಿತ್ತು.

ಕೈ ಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ

1 ರಿಂದ 5 ನೇ ತರಗತಿ ಶಾಲೆ ಆರಂಭದ ದಿನವೇ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೈ ಗೆ ಕಪ್ಪು ಪಟ್ಟಿ ಧರಿಸಿಕೊಂಡು ಶಿಕ್ಷಕರು ತರಗತಿಗೆ ಹಾಜರಾಗಿದ್ದಾರೆ. ವೃಂದ ಮತ್ತು ನೇಮಕಾತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆ ಹಿನ್ನೆಲೆಯಲ್ಲಿ ಕೊಪ್ಪಳದ ಸಿಪಿಎಸ್ ಶಾಲೆಯಲ್ಲಿ ಒಟ್ಟು 16 ಶಿಕ್ಷಕರು ಕೈ ಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ABOUT THE AUTHOR

...view details